ಡಾಂಬರಿಕರಣಗೊಂಡ ರಸ್ತೆ ಸಾರ್ವಜನಿಕ ಉಪಯುಕ್ತತೆಗೆ ಚಾಲನೆ

Asphalted road launched for public utility

ಗದಗ 13 :  ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ .27 ನೇ ವಾರ್ಡಿನ ವೆಂಕಟೇಶ್ ಟಾಕೀಸ್ ಹಿಂದಿನ ಭಾಗದಲ್ಲಿನ ಪೂಜ್ಯ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಉದ್ಯಾನವನ ಹಾಗೂ ಪ್ರಗತಿ ಮಾರ್ಗ ರಸ್ತೆಯ ಡಾಂಬರಿಕರಣ ಕಾಮಗಾರಿಯನ್ನು ವಾರ್ಡಿನ ಜನಸ್ನೇಹಿ ನಗರಸಭಾ ಸದಸ್ಯಣೀಯರಾದ ಶ್ರೀಮತಿ.ಲಲಿತಾ.ಬ.ಅಸೂಟಿ  ಇವರ ನೇತೃತ್ವದಲ್ಲಿ ಕಾಮಗಾರಿಕೆ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿ ಕೊಡಲಾಯಿತು. 

ಈ ಸಂದರ್ಭದಲ್ಲಿ  ಗದಗ ಬೆಟಗೇರಿ  ನಗರಸಭೆಯ ಮಾಜೀ ಅಧ್ಯಕ್ಷರಾದ ಬಿ.ಬಿ.ಅಸೂಟಿ, ಬಡಾವಣೆಯ ಹಿರಿಯರಾದ ರವಿ.ಶಿವಪ್ಪಗೌಡರ. ವಿಜಯಕುಮಾರ್‌.ಗಡ್ಡಿಡಾ. ಶ್ರೀಧರ್ ಕುರುಡಗಿ. ಶ್ರೀಯುತ. ಕಾರಂತ. ಹಿರೇಗೌಡ್ರು . ಮಲ್ಲಣ್ಣ ಮಲ್ಲಾಡದ. ಶ್ರೀಯುತ ಬಂಗಾರಿ .ತಿಮ್ಮಣ್ಣ ಕೋನರಡ್ಡಿ. ರವಿಕುಮಾರ್ ರೆಡ್ಡಿ .ಶಿವಪುತ್ರ ಅಂಗಡಿ ಡಾ.. ಸಂಜೀವ. ಚಿಂತಾಮಣಿ. ಡಾ!ರಾಜಶೇಖರ ಪಾಟೀಲ್‌. ಟಿ.ಎಚ್‌.ಬಾಪಣಾ. ಡಾ. ಜೋಶಿ ಮಹೇಶ್ ಬೆಲ್ಲದ್‌. ರಾಜೇಶ್ ಕೊಠಾರಿ. ಶಿವಪುತ್ರಪ್ಪ ಶಿವಪ್ಪಗೌಡ್ರು. ಎಂ.ಡಿ.ಬಳ್ಳಾರಿ  ಇನ್ನಿತರೆ ಸಮಸ್ತ ಮುಖಂಡರ ಉಪಸ್ಥಿತಿಯಲ್ಲಿ ಸುಸಜ್ಜಿತವಾಗಿ ಡಾಂಬರಿಕರಣಗೊಂಡ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಲಾಯಿತು. ಈ ಒಂದು ನಗರಸಭೆ ಸದಸ್ಯರ ಜನಪರ ಅಭಿವೃದ್ಧಿ ಕಾರ್ಯಗಳಿಗೆ  ಸಮಸ್ತ ನಾಗರಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.