ಅಟಲ್ ಬಿಹಾರಿ ವಾಜಪೇಯಿ 94ನೇ ಜನ್ಮ ದಿನದ ನಿಮಿತ್ಯ ಸುಶಾಸನ ದಿನಾಚರಣೆ

ಬೆಳಗಾವಿ 27: ಗೋಮಟೇಶ ವಿದ್ಯಾಪೀಠದಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದವತಿಯಿಂದ ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇ ಇವರ 94ನೇ ಜನ್ಮ ದಿನದ ನಿಮಿತ್ಯ ಸುಶಾಸನ ದಿನವನ್ನು ದಿ. 25ರಂದು ಆಚರಿಸಲಾಯಿತು. 

ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಅಟಲ್ ಬಿಹಾರಿ ವಾಜಪೇ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ  ಅಟಲ ಬಿಹಾರಿ ವಾಜಪೇ ಅವರು ಮಾಡಿದಂತಹ ಸಾಧನೆಗಳ ಬಗ್ಗೆ ಮಾತನಾಡಿ ಇವರು ದೇಶದಲ್ಲಿ ಭಾರತೀಯ ಜನತಾ ಪಾಟರ್ಿಯನ್ನು ಬಲಿಷ್ಟವಾಗಿ ಸಂಘಟಿಸಿ, ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು, ಇವರು ಅಂಧೇರಾ ಚಟೇಗಾ ಸೂರಜ ನಿಕಲೇಗಾ ಕಮಲ ಖಿಲೇಗಾ ಎಂಬ ಘೋಷಣೆಯೊಂದಿಗೆ ಕಾರ್ಯಕರ್ತರನ್ನು ಹುರದುಂಬಿಸಿದರು. ನಮ್ಮಂತಹ ಕಾರ್ಯಕರ್ತರಿಗೆ ಇವರು ಸ್ಫೂತರ್ಿಯಾಗಿದ್ದರು, ಅವರ ಹಾಕಿದ ಹಾದಿಯಲ್ಲಿ ನಾವೆಲ್ಲರೂ ಅವರನ್ನು ಸ್ಮರಿಸುತ್ತಾ ಮುಂದಿನ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ಮಹೇಶ ಮೋಹಿತೆ, ರಾಜ್ಯ ಕಾರ್ಯಕಾರಿಣೀ ಸದಸ್ಯ ಯುವ ಮೋಚರ್ಾ ಯುವರಾಜ ಜಾಧವ, ಮಂಡಳ ಪ್ರಧಾನ ಕಾರ್ಯದಶರ್ಿಗಳಾದ ಪ್ರವೀಣ ಪಾಟೀಲ, ರವಿ ಕೊಟಬಾಗಿ, ತಾಲೂಕಾ ಪಂಚಾಯತ ಸದಸ್ಯರಾದ ರಂಜನಾ ಅರುಣ ಕೋಲಕಾರ, ಹಿರಿಯ ಮುಖಂಡರಾದ ಹೇಮಂತ ಪಾಟೀಲ, ಜಿಲ್ಲಾ ಪಂಚಾಯತ ಸದಸ್ಯರಾದ ಸುಮನ ಪಾಟೀಲ, ಯುವ ಮೋಚರ್ಾ ಅಧ್ಯಕ್ಷರಾದ ಚೇತನ ಪಾಟೀಲ, ಕಪೀಲ ತ್ಯಾಗಿ, ವೀರಭದ್ರಯ್ಯಾ ಪೂಜೇರ, ಡಾ:ಯಲ್ಲಪ್ಪಾ ಪಾಟೀಲ, ಮಂಜು ಧರೆಣ್ಣವರ, ಅಭಯ ಅವಲಕ್ಕಿ ಸಮಸ್ತ ಮಂಡಲ ಕಾರ್ಯಕರ್ತರು ಪಾಲ್ಗೊಂಡಿದ್ದರು.