ಅಜಾತ ಶತ್ರು, ದೇಶಕಂಡ ಅಪ್ರತಿಮ ಜನನಾಯಕ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ; ವಿ.ಎಸ್.ಪಾಟೀಲ


ಮುಂಡಗೋಡ; ಹುಟ್ಟುವಾಗ ಉಸಿರು ಸಾಯುವಾಗ ಹೆಸರು ಎಂಬಂತೆ  ಮಹಾತ್ಮರ ಹೆಸರುಗಳ ಸಾಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರು ಸೇರಿದೆ. ಇತಿಹಾಸದ ಪುಟದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುತ್ತದೆ. ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು.  

ತಾಲೂಕು ಬಿಜೆಪಿ ಘಟಕದ ವತಿಯಿಂದ ಶುಕ್ರವಾರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಭಾರತದ ಮಾಜಿ ಪ್ರಧಾನ ಮಂತ್ರಿ, ಅಜಾತ ಶತ್ರು, ದೇಶಕಂಡ ಅಪ್ರತಿಮ ಜನನಾಯಕ ಭಾರತ ರತ್ನ ಅಟಲ್ ಬಿಹಾರಿ ವಾಜಪೆ ಯವರ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಅಶ್ರುತರ್ಪಣ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಿದ್ದರು. 

ಅಧಿಕಾರ ಬಂದಾಗ ನಾವು ಏನು ಬದಲಾವಣೆ ಮಾಡಬಹುದು ಮತ್ತು ಹೇಗೆ   ರಾಜಕೀಯವನ್ನು ಮಾಡುವುದು ಎಂಬುವುದನ್ನು ವಾಜಪೇಯಿಯವರಿಂದ ಕಲಿಯಬೇಕು. ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಾಗಲಿ ಅಥವಾ ನದಿ ಜೋಡಣೆಯಾಗಲಿ ಇನ್ನೂ ಅನೇಕ ಪ್ರಗತಿಪರ ಕಾರ್ಯಗಳಿಂದ ವಾಜಪೇಯಿಯವರ ಕಾಲದಿಂದ ನಾವು ಬದಲಾವಣೆಯನ್ನು ಕಂಡಿದ್ದೇವೆ. ಇವರನ್ನು ವಿರೋಧ ಪಕ್ಷದವರೂ ಕೂಡ ಟೀಕಿಸಲಿಲ್ಲ.ವಾಜಪೇಯಿ ಮತ್ತೆ ನಮ್ಮ ದೇಶದಲ್ಲಿಯೇ ಹುಟ್ಟಿ ಬರಲಿ ಎಂಬ ಆಶಯ ವ್ಯಕ್ತಪಡಿಸಿದರು.   

ಭಾರತಿಯ ಜನತಾ ಪಕ್ಷದ ತಾಲೂಕಾ ಅಧ್ಯಕ್ಷ ಗುಡ್ಡಪ್ಪ ಕಾತೂರ ಮಾತನಾಡಿ ಭಾರತೀಯ ಜನತಾ ಪಾಟರ್ಿಯ ಸಂಸ್ಥಾಪಕ ಅಧ್ಯಕ್ಷ ಹಾಗೂ ದೇಶ ಕಂಡ ಅಪ್ರತಿಮ ನಾಯಕ ವಾಜಪೇಯಿಯವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಭಾರತೀಯ ಜನತಾ ಪಾಟರ್ಿಯನ್ನು ಉತ್ತುಂಗಕ್ಕೇರಿಸುವ ಕೆಲಸ ಮಾಡೋಣ ಎಂದು ಹೇಳಿದರು. 

ಜಿಲ್ಲಾ ಪಂಚಾಯತ ಸದಸ್ಯ ಎಲ್.ಟಿ.ಪಾಟೀಲ್ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೇ ಒಬ್ಬ ಮೇಧಾವಿಯಾಗಿ ಸಂಘದ ಕಾರ್ಯಕರ್ತರಾಗಿ ಜನಸಂಘಟನೆಯ ಮುಖಾಂತರ ರಾಜಕೀಯ ಪ್ರವೇಶ ಮಾಡಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಂಸದರಾಗಿ ಸೇವೆ ಸಲ್ಲಿಸಿದರು. ದೇಶದ ದೊಡ್ಡ ವ್ಯಕ್ತಿ ಹಾಗೂ ಪ್ರಧಾನಿಯಾಗುತ್ತಾರೆಂದು ಇವರ ಬಗ್ಗೆ ನೆಹರೂರವರು ಮೊದಲೇ ಭವಿಷ್ಯ ನುಡಿದಿದ್ದರು. ಇಡೀ ಜಗತ್ತೇ ನಮ್ಮ ರಾಷ್ಟ್ರದ ಕಡೆಗೆ ನೋಡುವಂತೆ ಪ್ರಬಲ ರಾಷ್ಟ್ರವನ್ನಾಗಿ ಮಾಡಿದ ವಾಜಪೇಯಿಯವರು ನಮ್ಮಲ್ಲಿ ಚೈತನ್ಯ ತರಲಿ ಎಂದು ಹೇಳಿದರು.

ನಂತರ ಶಿವಾಜಿ ಸರ್ಕಲ್ ನಲ್ಲಿ ವಾಜಪೆಯವರ ಭಾವಚಿತ್ರಕ್ಕೆ ಮಾಲರ್ಪಣೆಮಾಡಿ ಪುಷ್ಟನಮನ ಸಲ್ಲಿಸಿ ಶೃದ್ಧಾಂಜಲಿ ಅಪರ್ಿಸಲಾಯತು. ತಾಲೂಕಿನ ವಿವಿಧಡೆಯಲ್ಲಿ ಶ್ರದ್ಧಾಂಜಲಿ ಅಪರ್ಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಬಸವರಾಜ ಓಶೀಮಠ, ರಾಮಕೃಷ್ಣ ಮೂಲಿಮನಿ, ಮಹೇಶ ಹೊಸಕೊಪ್ಪ, ನಾಗಭೂಷಣ ಹಾವಣಗಿ, ವಿನಾಯಕ ರಾಯ್ಕರ, ಉಮೇಶ ಬಿಜಾಪೂರ, ಅಶೋಕ ಚಲವಾದಿ, ಗುರುರಾಜ ಕಾಮತ, ವೃಷಭರಾಜ ಅಂಗಡಿ, ಡಿ.ಜೆ.ಕುಲಕಣರ್ಿ,ಗೀರಿಶ ಕಾತೂರ.ಗಣೇಶ ಬಾಪುಗೌಡ ಪಾಟೀಲ, ನಾಗರಾಜ ಕುನ್ನೂರ, ನಾಗರಾಜ ಬೆಣ್ಣಿ, ವಿಠಲ ಬಾಳಂಬೀಡ, ಬಸವರಾಜ ಹರಿಜನ, ಬಿ.ಎಂ.ರಾಯ್ಕರ, ತುಕಾರಾಮ ಕಲಾಲ, ಕೆಂಜೋಡಿ ಗಲಬಿ, ಪ್ರಕಾಶ ಅಂಕಲಕೋಟಿ, ಫಣಿರಾಜ ಹದಳಗಿ, ಮಂಜುನಾಥ ನಡಗೇರಿ, ರಮೇಶ ಸವಣೂರ, ಮಹ್ಮದಗೌಸ ಅತ್ತಾರ, ಶರೀಫ ಕರಿಮಸಾಬನವರ, ಅನಿಸ್ ಅತ್ತಾರ, ಟಿಬೇಟಿಯನ್ ಬೌದ್ಧಬಿಕ್ಕುಗಳು ಉಪಸ್ಥಿತರಿದ್ದರು.