ಅಯೋಧ್ಯೆ, ಮಾ, 25: ಪ್ರಯಾಗ್ ರಾಜ್ ನಿಂದ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯವರೆಗೆ ದೋಣಿಯ ಮೂಲಕವೇ ಗಂಗಾ ಯಾತ್ರೆ ಪೂರ್ಣ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇದೆ 27 ರಂದು ಅಯೋಧ್ಯೆಗೆ ಭೇಟಿ ನೀಡಿ ಮತ ಬೇಟೆಗಾಗಿ ಟೆಂಪಲ್ ರನ್ ಮಾಡುವ ಮೂಲಕ ಮೃದು ಹಿಂದುತ್ವ ಕಾರ್ಯಸೂಚಿ ಮುಂದುವರೆಸಲಿದ್ದಾರೆ.
ಪ್ರಿಯಾಂಕ ರೈಲಿನ ಮೂಲಕ ಅಯೋಧ್ಯೆಗೆ ಆಗಮಿಸುವ ಅವರು , ಹನುಮಾನ್ ಗಿರಿ ಮತ್ತು ಮತ್ತು ಬಿರ್ಲಾ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ 2017 ರ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅಯೋಧ್ಯೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರಂತೆ ರಾಮ್ ಲಾಲ್ಲಾ ತಾತ್ಕಾಲಿಕ ದೇವಸ್ಥಾನದಲ್ಲಿ ವಿವಾದಾಸ್ಪದ ಸ್ಥಳಕ್ಕೆ ಭೇಟಿ ನೀಡುವುದಿಲ್ಲ ಎನ್ನಲಾಗಿದೆ
ಪಾರ್ಟಿಗೆ ಹೊಸ ರೂಪ ಕೊಡುವ ಪ್ರಯತ್ನದಲ್ಲಿ ಕಾಂಗ್ರೆಸ್ ಪ್ರಭುತ್ವ ಈಗಾಗಲೇ ಪ್ರಯಾಗ್ ರಾಜ್ ಸಂಗಮ್ ತೀರದಲ್ಲಿ ನೆಲೆಗೊಂಡಿರುವ ಪ್ರಸಿದ್ದ 'ಬಾನ್ವವಾಲೆ ಹನುಮಾನ್ಜಿ ದೇವಸ್ಥಾನ' ಹಾಗೂ ವಿಂಧ್ಯಾಚಲ್ ದೇವಸ್ಥಾನ, ಸಿಟಮಾರಿ ದೇವಸ್ಥಾನ ಮತ್ತು ಇತ್ತೀಚೆಗೆ ವಾರಣಾಸಿಯಲ್ಲಿರುವ ಬಾಬಾ ವಿಶ್ವನಾಥ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.
ಮಾರ್ಚ್ 26 ರ ರಾತ್ರಿ ಪ್ರಿಯಾಂಕಾ ಅವರು ದೆಹಲಿಯಿಂದ ಕೈಫಾಯಿಟ್ ಎಕ್ಸ್ಪ್ರೆಸ್ ರೈಲಿನ ಮೂಲಕ ಫೈಜಾಬಾದ್ ಗೆ ಆಗಮಿಸಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಅವರು ಬುಧವಾರ ಹನುಮಾನ್ ಗಿರಿ ದೇವಸ್ಥಾನಕ್ಕೆ ಹಾಗೂ ಬಿರ್ಲಾ ದೇವಸ್ಥಾನಕ್ಕೂ ಭೇಟಿ ನೀಡಲಿದ್ದಾರೆ ಪಕ್ಷದ ಮೂಲಗಳು ಯುಎನ್ಐ ಗೆ ತಿಳಿಸಿವೆ.
ನಂತರ , ತೆಹರಿ ಬಜಾರ್ ನಿಂದ ಶೋ ಮಾಡಲಿದ್ದಾರೆ , ರನೋಪಾಲಿ, ಅವಧಪುರಿ ಕಾಲನಿ, ಬೆನಿಗಂಜ್, ಸಹಭಗಂಜ್, ರಾಮ್ಜಂಕಿ ದೇವಸ್ಥಾನ, ಕಣ್ಣಿನ ಆಸ್ಪತ್ರೆ ಮೂಲಕ ರೋಡ್ ಶೋ ಸಾಗಲಿದೆ. ಬಳಿಕ , ಅವರು ಕೊಟ್ವಾಲಿ, ಟಾಪ್ ವಾಲಿ ಕೋತಿ, ಚೌಕ್, ಸುಭಾಷ್ ನಗರದಿಂದ ಫತೇಗಂಜ್ ಗೆ ಹೋಗಲಿದ್ದಾರೆ. ಫೈಜಾಬಾದ್ ಕ್ಷೇತ್ರದಿಂದ ಯುಪಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿರ್ಮಲ್ ಖತ್ರಿ ಅವರು ಕಣಕ್ಕೆ ಇಳಿದಿದ್ದಾರೆ.