ಬೆಲೆ ಏರಿಕೆ ವಿರುದ್ದ ಬಿ ಜೆ ಪಿ ಪ್ರತಿಭಟನೆ
ಯಮಕನಮರಡಿ, 07 : ಭಾರತೀಯ ಜನತಾ ಪಾರ್ಟೀ ಚಿಕ್ಕೋಡಿ ಜಿಲ್ಲೆಯ ಯಮಕನಮರಡಿ ಮಂಡಲದ ವತಿಯಿಂದ ದಿ 7 ರಂದು ಮುಂಜಾನೆ 11 ಗಂಟೆಗೆ ಯಮಕನಮರಡಿ ಅಪಾರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು ಪ್ರತಿಬಟನೆ ನಡೆಸಿದರು. ರಾಜ್ಯದಲ್ಲಿ ಹಾಲು ಪೇಟ್ರೋಲ್ ಡಿಸೇಲ ನ ದರ ಏರಿಕೆ ಹಾಗೂ ಸಹೋದರ ಕೆ. ವಿನಯ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೆಕೆಂದು ಒತ್ತಾಯಿಸಿ ಕಾರ್ಯಕರ್ತರು ಬೃಹತ್ತ ಪ್ರತಿಭಟನೆ ನಡೆಸಿ ಮಾನ್ಯ ಉಪವಿಭಾಗ ಅಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿಯನ್ನು ಮಾಡಿಕೊಳ್ಳುತ್ತೇವೆ.
ಈ ಸಂದರ್ಬದಲ್ಲಿ ಬಿಜೆಪಿ ಮುಖಂಡ ಬಸವರಾಜ ಹುಂದ್ರಿ ಚಿಕ್ಕೋಡಿ ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು, ಶ್ರೀಶೈಲ ಯಮಕನಮರಡಿ ಮಂಡಲ ಅಧ್ಯಕ್ಷರು ಯಮಕನಮರಡಿ ಉತ್ತರ ಮಂಡಲ ಹಾಗೂ ಅಪ್ಪಯ್ಯಾ ಜಾಜರಿ ಅಧ್ಯಕ್ಷರು ಯಮಕನಮರಡಿ ದಕ್ಷಿಣ ಮಂಡಲ ಹಾಗೂ ಸ್ಥಳೀಯ ಬಿ ಜೆ ಪಿ ಮುಖಂಡ ರವೀಂದ್ರ ಹಂಜಿ, ಮಹಾವೀರ ನಾಶಿಪುಡಿ, ಚಂದ್ರು ಕಾಪಶಿ, ಈರಣ್ಣಾ ಗೋರವ, ಮುರುಗೇಶ ಹಿರೇಮಠ ಖಾನಾಪುರ, ವರಲಕ್ಷ್ಮೀ ಮಸೂತಿ ಮಹಿಳಾ ಘಟಕದ ಮುಖ್ಯಸ್ಥರು ಹಾಗೂ ಅಪಾರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು ಸ್ಥಳಿಯ ನಾಡಕಛೇರಿಗೆ ಬಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.