ತಹಶೀಲ್ದಾರ ಕಛೇರಿಯಲಿ ದಿ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ

Babu Jagjivan Ram's birthday celebration at the Tahsildar's office

ತಹಶೀಲ್ದಾರ ಕಛೇರಿಯಲಿ ದಿ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ 

ಯರಗಟ್ಟಿ, 05: ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ ಸಂದೇಶ ಸಾರಿದ ಹೆಗ್ಗಳಿಕೆ ಡಾ.ಬಾಬು ಜಗಜೀವನರಾಂ ಅವರಿಗೆ ಸಲ್ಲುತ್ತದೆ’ ಎಂದು ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಹೇಳಿದರು. 

ತಾಲ್ಲೂಕು ಆಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆ ಸಹಯೋಗದಲ್ಲಿ ಶನಿವಾರ ತಹಶೀಲ್ದಾರ ಕಛೇರಿಯಲ್ಲಿ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ದಿ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಂತರ ದಲಿತ ಮುಖಂಡ ಭಾಸ್ಕರ ಹಿರೇಮೇತ್ರಿ ಮಾತನಾಡಿ ‘ಸಮಾಜ ಸುಧಾರಣೆ ಹಾಗೂ ಎಲ್ಲರೂ ಸಮಾನವಾಗಿ ಜೀವನ ನಡೆಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದರು. ಕಾರ್ಮಿಕರ ಏಳಿಗೆಯನ್ನು ಸದಾ ಬಯಸುತ್ತಿದ್ದರು. ದೇಶದ ಜನರು ಅಹಾರ ಕೊರತೆ ಅನುಭವಿಸುತ್ತಿರುವುದನ್ನು ಕಂಡು ಹಸಿರು ಕ್ರಾಂತಿ ಪ್ರಾರಂಭಿಸಿ ನೆರವಾದರು’ ಎಂದು ತಿಳಿಸಿದರು. 

ಈ ವೇಳ ಪಿಎಸ್‌ಐ ಎಲ್‌. ಬಿ. ಮಾಳಿ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ, ವೈಧ್ಯಾಧಿಕಾರಿ ಡಾ. ಬಿ. ಎಸ್‌. ಬಳ್ಳುರ, ಪಶು ವೈಧ್ಯಾಧಿಕಾರಿ ಎಂ. ವ್ಹಿ. ಪಾಟೀಲ, ಶೀರಸ್ದಾರ ಎಸ್‌. ಬಿ. ಕುಲರ್ಕಣಿ, ಉಪ ತಹಶೀಲ್ದಾರ ಸಂತೋಷ ಜಾದವ ದಲಿತ ಮುಖಂಡರಾದ ಲಕ್ಕಪ್ಪ ಹುಣಶೀಕಟ್ಟಿ, ಚಿದಂಬರ ಕಟ್ಟಮನಿ, ಸಂತೋಷ ಹುಣಶೀಕಟ್ಟಿ, ವಿಜಯ ಆರೇನ್ನವರ, ನವೀನ ಹುಣಶೀಕಟ್ಟಿ ಸೇರಿದಂತೆ ರೈತ ಸಂಘದ, ದಲಿತ ಸಂಘದ ಮುಖಂಡರು ಇದ್ದರು.