ವಚನಗಳ ಮೂಲಕ ಮಹಿಳೆಯರ ಸಹಜ ಜೀವನವನ್ನು ಚಿತ್ರಿಸಿದ ಬಸವಣ್ಣನವರು - ಶಾಂತಾ ರಿತ್ತಿ

Basavanna depicted the natural life of women through his verses - Shantha Ritti

ವಚನಗಳ ಮೂಲಕ ಮಹಿಳೆಯರ ಸಹಜ ಜೀವನವನ್ನು ಚಿತ್ರಿಸಿದ ಬಸವಣ್ಣನವರು - ಶಾಂತಾ ರಿತ್ತಿ  

ರಾಣೇಬೆನ್ನೂರ 04:  ಅಯ್ಯಾ, ನೀನು ನಿರಾಕಾರವಾರ್ಗದ್ದಲ್ಲಿ  ನಾನು ಜ್ನಾನವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ,   ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ, ಕಾಣಾ ಅಯ್ಯಾ,  ನೀನು ಆಕಾರವಾಗಿರ್ದಲ್ಲಿ ನಾನು ವೃಶಭನೆಂಬ ವಾಹನವಾಗಿರ್ದೆ ಕಾಣಾ ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಛನನಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ ನಿರ್ಗುಣ ನಿರಾಕಾರದೈವವನ್ನು ನಾವು ನಂಬಿದ ರೀತಿಯಲ್ಲಿ ರೂಪಿಸಿಕೊಂಡು ಕಾಯಕದಲ್ಲಿ ಆತನನ್ನು ಆರಾಧಿಸಬಹುದು. 12ನೇ ಶತಮಾನದಲ್ಲಿಯೇ ಕಾಯಕದ ಮಹತ್ವವನ್ನು ಕಾಯಕಯೋಗಿ ವಿಶ್ವಮಾನವತಾವಾದಿ ಬಸವಣ್ಣನವರು ವಚನಗಳ ಮೂಲಕ ನಮಗೆ ತಿಳಿಸಿದ್ದಾರೆ.   ಎಂದು ಸರ್ವ ಶಕ್ತಿ ಮಹಿಳಾ ಸಂಘದ  ಅಧ್ಯಕ್ಷ ಶಾಂತಾ ರಿತ್ತಿ ಹೇಳಿದರು.  ಅವರು ಇಲ್ಲಿನ ಆದಿಶಕ್ತಿ ದೇವಸ್ಥಾನದಲ್ಲಿ  ಸರ್ವ ಶಕ್ತಿ ಮಹಿಳಾ ಸಂಘವು ಆಯೋಜಿಸಿದ್ದ, ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಗಜ್ಯೋತಿ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕ,ಬಸವ ಎಂದರೆ ಸಮಾನತೆಯ ಭಾವ, ಉತ್ತಮ ಸಮಾಜದ ಹರಿಕಾರ, ವಿಶ್ವ ಗುರು ಜಗಜ್ಯೋತಿ ಬಸವಣ್ಣನವರು ನಾಡಿನ ಸಂಸ್ಕೃತಿಯ ಹರಿಕಾರಾಗಿದ್ದಾರೆ ಅಂಥವರ,  ಜಯಂತಿಯ ಮೂಲಕ ಸಮಾನತೆಗೆ, ಮತ್ತು ಭಾವೈಕ್ಯತೆಗೆ ಅವರ ವಿಚಾರಧಾರೆಗಳನ್ನು ಮನೆ ಮತ್ತು ಮನಕ್ಕೆ ತಲುಪಿಸುವ ಕಾರ್ಯ ಮಾಡಬೇಕಾದ ಅಗತ್ಯವಿದೆ ಎಂದರು . ಎಂ ಸಿ ಎಸ್ ಶಾಲೆಯ ಗುರುಮಾತೆ ವಿದ್ಯಾವತಿ ಮಳಿಮಠ ಅವರು ವಿಶ್ವಗುರು ಜಗಜ್ಯೋತಿ ಬಸವೇಶ್ವರರು ವಿಷಯ ಕುರಿತು  ಉಪನ್ಯಾಸ ನೀಡಿದರು. ಕಾವ್ಯಾ ಮೂಕಯ್ಯನಮಠ ವಚನ ಗಾಯನ ಹಾಡಿದರು. ಪುಷ್ಪಾ ರೋಖಡೆ,  ಪ್ರೇಮಾ,  ಚಂಪಾ ಅಂಗಡಿ, ಸುಮೇಧಾ, ದ್ರಾಕ್ಷಾಯಿಣಿ ಮೂಲಿಮಠ ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು. ಧರತಿ ಪ್ರಾರ್ಥಿಸಿ, ಶ್ವೇತಾ ಕೊಂಡೋಜಿ ಸ್ವಾಗತಿಸಿ.  ಗೀತಾ ಮಾಡಳ್ಳಿ ನಿರೂಪಿಸಿ  ವಂದಿಸಿದರು.