ಬಯಲಾಟ ಇಂದಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಲುಕಿದೆ : ಕೆ.ಆರ್.ದುರ್ಗಾದಾಸ್.
ಕಂಪ್ಲಿ 17: ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸುವ ಮೂಲಕ ಅವರಿಗೆ ಮೌಲ್ಯಗಳ ಪಾಠ ಮಾಡುತ್ತಿದ್ದ ಬಯಲಾಟಗಳು ಇಂದು ಎಲೆಕ್ಟ್ರಾನಿಕ್ ಮಾಧ್ಯಮಗಳ ಹೊಡೆತಕ್ಕೆ ಸಿಕ್ಕಿ ತತ್ತರಿಸಿ ಹೋಗಿವೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್.ದುರ್ಗಾದಾಸ್ ವಿಷಾಧ ವ್ಯಕ್ತಪಡಿಸಿದರು. ಕಂಪ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರಿ್ಡಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾವಿರಾರು ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿ ಅವರಿಗೆ ಮೌಲ್ಯಗಳ ಪಾಠ ಮಾಡುತ್ತಿದ್ದ ಬಯಲಾಟಗಳು ಇದು ಎಲೆಕ್ಟ್ರಾನಿಕ್ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿವೆ ಎಂದು ವಿಷಾದಿಸಿದ ಅವರು ಬಯಲಾಟ ಪ್ರದರ್ಶನಗಳು ಪಾರಂಪರಿಕ ಪದ್ದತಿಗಳನ್ನು ಬಿಟ್ಟು ಲಘು ಮನೋರಂಜೆಯ ಹಾದಿ ಹಿಡಿದಿವೆ. ಗ್ರಾಮೀಣ ಪ್ರದೇಶದ ಜನರಿಗೆ ಪುರಾಣ,ಸಂಗೀತ, ಕುಣಿತ, ಅಭಿನಯಾದಿಗಳನ್ನು ಪರಿಯಿಸುತ್ತಿದ್ದ ಬಯಲಾಟಗಳನ್ನು ಇಂದು ಸಂರಕ್ಷಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿಯು ಹಲವಾರು ಕ್ರಿಯಾಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬಯಲಾಟ ಕಲಾವಿದರ ಮಾಹಿತಿ ಕೋಶವನ್ನು ಸಿದ್ಧಪಡಿಸುವುದು,ಬಯಲಾಟ ಹಸ್ತಪ್ರತಿಗಳನ್ನು ಸಂಗ್ರಹಿಸಿ,ಸಂರಕ್ಷಿಸಿ ಪ್ರಕಟಿಸುವುದು, ಬಯಲಾಟ ಪ್ರದರ್ಶನಗಳಿಗೆ ಸಹಾಯಧನ ನೀಡುವುದು, ಹೊಸ ತಲೆಮಾರಿನ ಯುವಕರಿಗೆ ಬಯಲಾಟ ತರಬೇತಿ ನೀಡುವುದು,ಹೆಸರಾಂತ ಬಯಲಾಟ ಕಲಾವಿದರಿಗೆ ಗೌರವ ಪ್ರಶಸ್ತಿ,ವಾರ್ಷಿಕ ಪ್ರಶಸ್ತಿಗಳನ್ನು,ಕಲಾವಿದರಿಗೆ ಮಾಶಾಸನ ಕೊಡುವುದರ ಮೂಲಕ ಬಯಲಾಟ ಕಲೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಮಲ್ಲೇಶಪ್ಪ, ಕನ್ನಡ ಉಪನ್ಯಾಸಕರಾದ ನಂ.10 ಮುದ್ದಾಪುರದ ಜೀರ್ ಮಲ್ಲಿಕಾರ್ಜುನ, ಉಪನ್ಯಾಸಕ ಡಾ.ಕೆ.ಶಿವಪ್ಪ, ಕಲಾವಿದರಾದ ಉಪ್ಪಾರ ದೊಡ್ಡಬಸಪ್ಪ ಹಾಗೂ ಬಸವರಾಜ, ಯಲ್ಲಪ್ಪ ಸೇರಿದಂತೆ ಇತರರು ಇದ್ದರು.