ಲೋಕದರ್ಶನ ವರದಿ
ಬೆಳಗಾವಿ, 22: ಎನಜರ್ಿ ಮೈಕ್ರೋವೇವ್ ಸಿಸ್ಟಮ್ಸ್ ಪ್ರೈ. ಲಿ.ನ ಸಂಸ್ಥಾಪಕ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿದರ್ೇಶಕ ಡಾ. ಪ್ರಕಾಶ ಮುಗಳಿ ಅವರು ನವದೆಹಲಿಯಲ್ಲಿ ಆಯೋಜಿಸಿದ್ದ ಸಿಐಡಿಬಿಐ-ಇಟಿ ಇಂಡಿಯಾ ಎಂಎಸ್ಇ ಅವಾಡ್ಸರ್್-2018ರಲ್ಲಿ ಉತ್ಪಾದನೆ ವಿಭಾಗದಲ್ಲಿ ಭಾರತದ ಅತ್ಯಂತ ತಾಂತ್ರಿಕ ಸ್ನೇಹಿ ಸಣ್ಣ ಉದ್ಯಮ ಪ್ರಶಸ್ತಿ
ಸ್ವೀಕರಿಸಿದ್ದಾರೆ.
ನವದೆಹಲಿಯ ದಿ ತಾಜ್ ಪ್ಯಾಲೇಸ್ನಲ್ಲಿ 2019ರ ಜನವರಿ 12ರಂದು ಆಯೋಜಿಸಿದ್ದ ಸಮಾರಂಭದಲ್ಲಿ ಹಣಕಾಸು ಇಲಾಖೆ ಸಹಾಯಕ ಸಚಿವ ಶಿವಪ್ರಸಾದ ಶುಕ್ಲಾ ಪ್ರಶಸ್ತಿ ಪ್ರದಾನ ಮಾಡಿದರು. ಕೈಗಾರಿಕೆ ಆಹಾರ ಪರಿಷ್ಕರಣೆ, ಸಿರಾಮಿಕ್ಸ್ ಪರಿಷ್ಕರಣೆ, ಪಾಲಿಮರ್ ಇಂಗಿಸುವ ಪರಿಹಾರ, ಪ್ಲಾಸ್ಮಾ ಸಿಂಥೆಸಿಸ್ ಮತ್ತು ಆರ್ಎಫ್ ಮತ್ತು ಮೈಕ್ರೋವೇವ್ ಸಿಸ್ಟಂ ಅನುಕೂಲಕರ ವಿನ್ಯಾಸ ವಿಭಾಗದಲ್ಲಿ ಎನಜರ್ಿಯು ಉನ್ನತ ಶ್ಲಾಘನೆಗೆ ಪಾತ್ರವಾಯಿತು.