ಲೋಕದರ್ಶನ ವರದಿ
ಬಳ್ಳಾರಿ 20: ನಗರದ ಮಿಲ್ಲರ್ಪೇಟೆ ಪ್ರದೇಶದ ಗೃಹಣಿ ಮನೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ನೈರ್ಮಲ್ಯದ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಅರ್ಜುನ್ ಮಲ್ಲೂರು ಅವರು ವಿಚಾರಿಸಿದರು.
ನಗರದ ಮಿಲ್ಲರ್ಪೇಟೆ ಪ್ರದೇಶದಲ್ಲಿನ ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ಗುರುವಾರರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ 2020ರ ಜನವರಿ 31 ರವರೆಗೆ ಸಾರ್ವಜನಿಕರ ಮನೆ ಭೇಟಿ ನೀಡಿ "ನಾಗರಿಕರಿಗೆ ಒಂದು ಸವಾಲು" ಎಂಬ ಕಾರ್ಯಕ್ರಮಕ್ಕೆ ಪ್ರಶ್ನೆ ಕೇಳುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕತರ್ೆಯರು ಮತ್ತು ಆರೋಗ್ಯ ಸಹಾಯಕರು ತಮ್ಮ ಮನೆಗೆ ಭೇಟಿ ನೀಡಿ, ಡೆಂಗಿ, ಚಿಕುನ್ಗುನ್ಯ ಜ್ವರದ ಬಗ್ಗೆ ಚರ್ಚಿಸುವಾಗ ಸರಿಯಾದ ಉತ್ತರಗಳಿಗೆ ಅಂಕಗಳನ್ನು ಹಾಕಲಿದ್ದಾರೆ ಹಾಗೂ ಮನೆಯ ಒಳಗೆ ಉಪಯೋಗಿಸಿದ ತ್ಯಾಜ್ಯಗಳನ್ನು ನಿರ್ವಹಣೆ ಕುರಿತು ಮತ್ತು ಸೊಳ್ಳೆಗಳ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸಲಿದ್ದಾರೆ. ಸದರಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಪಡೆದು ಉತ್ತಮ ರೀತಿಯ ಜೀವನ ನಡೆಸುವ ಆರೋಗ್ಯವಂತ ಕುಟುಂಬ ಹಾಗೂ ಸ್ವಚ್ಛಮನೆಯನ್ನು ಆಯ್ಕೆ ಮಾಡಿ, ಪ್ರೋತ್ಸಾಹಿಸುವುದರ ಜೊತೆಗೆ ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದ ಎಂದು ನ್ಯಾ.ಅರ್ಜುನ್ ಮಲ್ಲೂರು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು ಮಾತನಾಡಿ, ಆಶಾ ಕಾರ್ಯಕತರ್ೆಯರು ಮತ್ತು ಆರೋಗ್ಯ ಸಹಾಯಕರು ಮನೆ ನೀಡಿದಾಗ ಸಾರ್ವಜನಿಕರ ಸಹಕಾರ ಅಗತ್ಯವಾಗಿರುತ್ತದೆ ಎಂದು ಹೇಳಿದ ಅವರು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಉತ್ತಮ ಜೀವನಶೈಲಿ ಮತ್ತು ಆಹಾರ ಪದ್ಧತಿ, ಘನ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಬಗ್ಗೆ ಕಾಳಜಿ, ಸಕರ್ಾರಿ ಆಸ್ಪತ್ರೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ, ಖಾಯಿಲೆಗಳ ಬಗ್ಗೆ ಭಯ ಮತ್ತು ಮೂಡನಂಬಿಕೆಗಳಣ್ನು ಹೋಗಲಾಡಿಸುವುದು, ಸಾಂಕ್ರಾಮಿಕ ರೋಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಿಬಿಡಿಸಿ ಅಧಿಕಾರಿ ಡಾ.ಆರ್.ಅಬ್ದುಲ್ಲಾ, ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಸವರ್ೇಕ್ಷಣಾಧಿಕಾರಿ ಡಾ.ಮರಿಯಂಬೀ.ವಿ.ಕೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ನಗರ ಪಾಲಿಕೆ ಆರೋಗಾಧಿಕಾರಿ ಡಾ.ಹನುಮಂತಪ್ಪ, ವಿಲ್ಲರ್ಪೇಟೆ ವೈದ್ಯಾಧಿಕಾರಿ ಡಾ.ಸೌಜನ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ವಿಬಿಡಿಸಿ ಕನ್ಸಲ್ಟೆಂಟ್ ಹೆಚ್.ಪ್ರತಾಪ್, ಹಿರಿಯ ಆರೋಗ್ಯ ಸಹಾಯಕ ಬಸವರಾಜ.ಯು, ಶಕುಂತಲಾ ಮ್ಯಾಳಿ, ಕೆ.ಮಲ್ಲಪ್ಪ, ಕಿರಿಯ ಆರೋಗ್ಯ ಸಹಾಯಕರಾದ ಶಕೀಲ್ ಅಹ್ಮದ್, ಮುಸ್ತಾಕ್ ಅಹ್ಮದ್, ಚಿದಾನಂದ, ಮರಿಬಸವನಗೌಡ ಚಾನಾಳ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಪಾಲಿಕೆ ಆರೋಗ್ಯ ನಿರೀಕ್ಷಕ ದಾದಾಪೀರ್, ಎಂ.ಟಿ.ಎಸ್.ಬಾಬುರಾವ್ ಸೇರಿದಂತೆ ಜಿಲ್ಲಾ ವಿಬಿಡಿಸಿ ಸಿಬ್ಬಂದಿ ವರ್ಗದವರು ಇದ್ದರು.