ಬಳ್ಳಾರಿ: ಕನ್ನಡ ಜ್ಯೋತಿಗೆ ವಿಶೇಷ ಪೂಜೆ

ಲೋಕದರ್ಶನ ವರದಿ

ಬಳ್ಳಾರಿ 31: 64ನೇ ಕನರ್ಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಿದ್ದು, ಇಂದು ಬಳ್ಳಾರಿಯ ಆದಿ ದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಕನ್ನಡ ಜ್ಯೋತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಮ್ಮರಚೇಡು ಮಠಾಧೀಶರಾದ ಶ್ರೀ ಕಲ್ಯಾಣ ಸ್ವಾಮೀಜಿಯವರು ಇಂದು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಜಂಗಮರ ಹೊಸಳ್ಳಿಯ ಜಗತ್ ಜಭುಲಿಂಗ ಮಹಾಸ್ವಾಮಿಗಳು ಹಾಗೂ ಕರವೇ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್ರವರು ಮತ್ತು ರೈತ ಸಂಘದ ಮುಖಂಡರಾದ ದರೂರು ಪುರುಷೋತ್ತಮಗೌಡ, ನಿಷ್ಠಿ ರುದ್ರಪ್ಪ, ಕನಕ ದುರ್ಗಮ್ಮ ದೇವಸ್ಥಾನದ ಧರ್ಮಧಿಕಾರಿಯಾದ ಪಿ.ಗಾದೇಪ್ಪ, ಕುಂದಾಪುರ ನಾಗರಾಜ ಹಾಗೂ ಎಲ್ಲಾ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಈ ಜ್ಯೋತಿಯ ಉಸ್ತುವಾರಿಯನ್ನು ಜಿಲ್ಲಾ ಉಪಾಧ್ಯಕ್ಷರಾದ ಜಿ.ಕೋಳೂರು ತಿಪ್ಪಾರೆಡ್ಡಿ ಹಾಗೂ ತಾಲ್ಲೂಕು ಅಧ್ಯಕ್ಷರಾದ ಅಂಗಡಿ ಶಂಕರ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದಶರ್ಿ ಆನಂದಗೌಡ ಇವರು ವಹಿಸಿರುತ್ತಾರೆ.