ಲೋಕದರ್ಶನ ವರದಿ
ಬಳ್ಳಾರಿ 20: ಕಲ್ಚರಲ್ ಆಕ್ಟಿವಿಟೀಸ್ ಆಸೋಸಿಯೇಷನ್ ವಾರ್ಷಿಕ ಸಭೆಯು ಅನಂತಪುರ ರಸ್ತೆಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ 'ಶರಣರ ಸಭಾಂಗಣ'ದಲ್ಲಿ ಜರುಗಿತು.
ಸಭೆ ಆರಂಭಕ್ಕೂ ಮೊದಲು ಅತಿವೃಷ್ಠಿ-ಅನಾವೃಷ್ಠಿ ಹೆಚ್ಚಿನ ಮಳೆಯಾಗಿರುವದರಿಂದ ನೊಂದ ಜನರ ಸಲುವಾಗಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಸಂಸ್ಥೆಯ ಪರವಾಗಿ ರೂ. 5000/-ಗಳನ್ನು ಕಳುಹಿಸಲಾಗಿದೆ. ಅಗಲಿದ ಗಣ್ಯರಿಗೆ ನೆರೆ ಹಾವಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಖ್ಯಾತರಂಗ ಕಲಾವಿದೆ ವೀಣಾಕುಮಾರಿ ಪ್ರಾರ್ಥನೆ ಮಾಡಿದರು, ಸಂಘದ ಅಧ್ಯಕ್ಷರಾದ ಶೀಲಾಬ್ರಹ್ಮಯ್ಯನವರು ಸ್ವಾಗತ ಕೋರಿದರು.
ನಾಡಿನ ಗಣ್ಯರಿಗೆ, ಸಾಧಕರಿಗೆ, ಪಿಯುಸಿ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಮುಂತಾದ ಗಣ್ಯ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪಿ.ಯು.ಸಿ.ಯ ವಿಜ್ಞಾನ ವಾಣಿಜ್ಯ ಕಲಾ ವಿಭಾಗದ 31 ವಿದ್ಯಾರ್ಥಿಗಳು, ಎಸ್.ಎಸ್.ಎಲ್.ಸಿ. ವಿಭಾಗದ 32 ವಿದ್ಯಾಥರ್ಿಗಳನ್ನು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಶಾಲನ್ನು ನೀಡಿ ಸತ್ಕರಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷರಾದ ಶೀಲಾಬ್ರಹ್ಮಯ್ಯ, ಕಾರ್ಯದರ್ಶಿಗಳಾದ ಎನ್.ಯಶವಂತರಾಜ್, ಉಪಾಧ್ಯಕ್ಷರಾದ ರವಿಕುಮಾರ, ಖಜಾಂಚಿಗಳಾದ ಡಾ. ಯಶವಂತ ಭೂಪಾಲರಿದ್ದರು. ಸಭೆಯಲ್ಲಿ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಆಸೋಸಿಯೇಷನ್ ಕಾರ್ಯಕಾರಿ ಮಂಡಳಿಯ ಸದಸ್ಯರು ಪ್ರತಿಭಾವಂತ ವಿದ್ಯಾಥರ್ಿಗಳು, ತಂದೆ ತಾಯಿ, ಪಾಲಕ ಪೋಷಕರು ಉಪಸ್ಥಿತರಿದ್ದರು