ಬಳ್ಳಾರಿ: ಪ್ರೇಕ್ಷಕರ ಮನರಂಜಿಸಿದ ಹಂದ್ಯಾಳ ತಂಡದ ರಕ್ತರಾತ್ರಿ ನಾಟಕ

ಲೋಕದರ್ಶನ ವರದಿ

ಬಳ್ಳಾರಿ 11: ಜಿಲ್ಲೆಯ ಸಂಡೂರು ತಾಲೂಕಿನ ಡಿ.ಅಂತಃಪುರ ಗ್ರಾಮದಲ್ಲಿ ಶ್ರೀ ಮಲೆಮ್ಮ ದೇವಿ   ನಾಲ್ಕನೆಯ ವರ್ಷದ ರಥೋತ್ಸವ ಅಂಗವಾಗಿ ಪಾಂಡುರಂಗ ಸೇವಾ ಟ್ರಸ್ಟ್ ಕೋಡಾಲು ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಬಳ್ಳಾರಿ  ಸಹಯೋಗದಲ್ಲಿ  ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಅವರ ತಂಡದಿಂದ ದಿ.ಕಂದಗಲ್ ಹನುಮಂತರಾಯರು ರಚಿಸಿದ ಮತ್ತು ಪುರುಷೋತ್ತಮ ಹಂದ್ಯಾಳು ಅವರ ನಿದರ್ೇಶನದಲ್ಲಿ ಅಭಿನಯಿಸಲ್ಪಟ್ಟ ರಕ್ತ ರಾತ್ರಿ ಪೌರಾಣಿಕ ನಾಟಕ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಯಿತು.

ಕುರಿ ಮತ್ತು ಹುಣ್ಣೆ ಅಭಿವೃದ್ಧಿ ನಿಗಮದ  ಮಾಜಿ ಅಧ್ಯಕ್ಷ ವೈ.ಎನ್ ಗೌಡರು ಅಶ್ವತ್ಥಾಮ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿ ಜನರ ಮೆಚ್ಚುಗೆಗೆ ಪಾತ್ರವಾದರು.82ರ ಹರೆಯದಲಿಯೂ ದ್ರೌಪದಿ ಪಾತ್ರಕ್ಕೆ ಜೀವ ತುಂಬಿದ ನಾಡೋಜ ಸುಭಧ್ರಮ್ಮ ಮನ್ಸೂರ್ ಅವರ ಅಭಿನಯ ನೋಡುಗರ ಕಣ್ಣನ್ನು ಅರಳಿಸಿತು. ಶ್ರೀ ಕೃಷ್ಣನ ಪಾತ್ರದಲ್ಲಿ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ ಚಿದಾನಂದಪ್ಪ ರಾರಾವಿ ಉತ್ತಮ ಅಭಿನಯ  

ಮಾಡಿದರು. ನಿದರ್ೇಶನವಲ್ಲದೆ ಶಕುನಿ ಪಾತ್ರದಲ್ಲಿ ಮಿಂಚಿದ ಪುರುಷೋತ್ತಮ ಹಂದ್ಯಾಳು ಅವರ ಅಭಿನಯ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಇದಲ್ಲದೆ ಧರ್ಮರಾಯನಾಗಿ ಡಿ.ಜಿ ಪೂಜಾರ್, ಭೀಮನಾಗಿ ಚಾಗಿಚಿದಾನಂದಪ್ಪ, ಅಜರ್ುನ ನಾಗಿ ಎನ್.ಎಮ್ ಕುಕನೂರ್, ದುರ್ಯೋಧನ ನಾಗಿ ಜಿ.ತಿಪ್ಪೇರುದ್ರಪ್ಪ, ಕರ್ಣ ಹಾಗೂ ಗಂರ್ಧವನಾಗಿ ಬ್ಯಾಳಿ ಶಿವಪ್ರಸಾದ, ಕಲಿ ಮತ್ತು ಶಿವನಾಗಿ   ಬಸಯ್ಯಸ್ವಾಮಿ, ನವಲಿಪಕ್ಕ ಶರಣಪ್ಪ ಮುಂಡ್ರಿಗಿ, ಭಾನುಮತಿ ಸೋಗಿರತ್ನ, ಮದಹಂಸಿ ಹಾಗೂ ಅನಂಗಪುಷ್ಪ ಉಮರಾಣಿ ಇಳಕಲ್, ಉತ್ತರೆಯಾಗಿ ವರಲಕ್ಷ್ಮಿ ಬಳ್ಳಾರಿ ಪಾತ್ರಕ್ಕೆ ಜೀವ ತುಂಬಿದರು.

ಸಂಗೀತ-ಕ್ಯಾಸಿಯೋ,ವಿರೂಪಾಕ್ಷ ರಾವ್ ಮೋರಿಗೆರೆ, ಹೆಚ್.ಬಿ.ಹಳ್ಳಿ ಮತ್ತು ಪ್ಯಾಡ್, ಯಮನೂರಪ್ಪ ಗಿಣಿಗೇರಿ, ತಬಲಾ, ವೀರೇಶ ಕಲ್ಮಠ್, ವಸ್ತ್ರಾಂಲಕಾರ ಮತ್ತು ಪ್ರಸಾದನ ರಮೇಶ ಶೆಟ್ಟಿ ಬಾವಿಹಳ್ಳಿ ರಂಗಕಲಾವಿದರಾದ ಕೆ.ಎಂ.ಹಾಲಪ್ಪ ಗಾದಿಗನೂರು ಹಾಗು ಗ್ರಾಮದ ಮುಖಂಡರು ಕಾರ್ಯಕ್ರಮದ ಆಯೋಜಕರು ಸೇರಿ ಎಲ್ಲಾ ಕಲಾವಿದರಿಗೆ   ಗೌರವಿಸಿ ಸನ್ಮಾನಿಸಿದರು.