ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಿ.ಟಿ.ರವಿ ಬೇಟಿ

ಬಳ್ಳಾರಿ 06: ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರವಾಸೋದ್ಯಮ, ಕರ್ನಾಟಕ ಸರ್ಕಾರ ಸಚಿವ ಸನ್ಮಾನ್ಯ ಸಿ.ಟಿ.ರವಿ ಭೇಟಿ ನೀಡಿದ್ದರು. ಸನ್ಮಾನ್ಯರನ್ನು ಮಂಟಪ ಸಭಾಂಗಣದ ಹಾಲ್ನಲ್ಲಿ ಮಾನ್ಯ ಕುಲಪತಿಯವರಾದ ಡಾ.ಸ.ಚಿ.ರಮೇಶ ಗೌರವಿಸಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಎಲ್ಲ ನಿಕಾಯಗಳ ಡೀನರುಗಳಾದ ಪ್ರೊ.ವೀರೇಶ ಬಡಿಗೇರ, ಪ್ರೊ.ಕೇಶವನ್ ಪ್ರಸಾದ್, ಪ್ರೊ.ಸಿ.ಮಹಾದೇವ, ಪ್ರೊ.ಕೆ.ರವೀಂದ್ರನಾಥ ಅವರು, ವಿವಿಧ ಅಧ್ಯಯನ ವಿಭಾಗಗಳ ಮುಖ್ಯಸ್ಥರು ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೊ.ರಮೇಶ ನಾಯಕ, ಅಧಿಕಾರಿಗಳಾದ ನಂಜಯ್ಯನವರ್ ಮೊದಲಾದವರು ಉಪಸ್ಥಿತರಿದ್ದರು.