ಲೋಕದರ್ಶನ ವರದಿ
ಬಳ್ಳಾರಿ 23: ನಗರದ ಕಪ್ಪಗಲ್ ರಸ್ತೆಯಲ್ಲಿರುವ ಕಿತ್ತೂರು ರಾಣಿಚೆನ್ನಮ್ಮ ಆವರಣದಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೈನ್ಬೋ ಮಕ್ಕಳ ಆಸ್ಪತ್ರೆ ಮಾರತ್ಹಳ್ಳಿ ಬೆಂಗಳೂರು ಅವರು ಇಂಡಿಯನ್ ಮೆಡಿಕಲ್ ಆಸೋಷಿಯನ್ ಸಹಯೋಗದೊಂದಿಗೆ ಬೆಳಗ್ಗೆ 9 ರಿಂದ ಮದ್ಯಾಹ್ನ 03 ಗಂಟೆಯವರಗೆ ಇದೇ ಮೊದಲ ಬಾರಿಗೆ 360ಕ್ಕೂ ಹೆಚ್ಚು ಮಕ್ಕಳ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.
ಈ ಮಕ್ಕಳಲ್ಲಿ ಉಂಟಾಗುವ ಪೀಡಿಯಾಟ್ರಿಕ್, ಹೆಮೆಟೊ ಅಂಕಾಲಜಿ, ಪೀಡಿಯಾಟ್ರಿಕ್, ನೆಪ್ರೋಲಾಜಿ, ಪೀಡಿಯಾಟ್ರಿಕ್ ಆರಥೋಪೆಡಿಕ್ಸ್, ಯೂರೋಲಾಜಿ, ಇ ಎನ್ ಟಿ, ನವಜಾತ ಮತ್ತು ಮಕ್ಕಳ ಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವಾರು ರೋಗಗಳಿಗೆ ವಿವಿಧ ಬಗೆಯ ವೈದ್ಯರ ತಂಡ ಬೆಂಗಳೂರು ಇವರು ತಪಾಸಣಾ ನಡೆಸಿದರು.
ಈ ಶಿಬಿರವನ್ನು ಐಎಂಎ ಕಾರ್ಯದರ್ಶಿ ಡಾ.ಭರತ್, ಸಹಕಾರ್ಯದರ್ಶಿ ಬಿ.ಕೆ.ಎಸ್.ಶ್ರೀಕಾಂತ್, ಸೇರಿದಂತೆ ಹಲವಾರು ಬಳ್ಳಾರಿಯ ನುರಿತ ವೈದ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ವೈದ್ಯರುಗಳಾದ ಡಾ.ಕವಿತ ಭಟ್, ಡಾ.ಲೀಲಾ ಬಾಲಚಂದ್ರ, ಡಾ.ಮನುಚೌದರಿ, ಡಾ.ಅನಿಲ್ ಪಾಂಡು, ಡಾ.ಹಕ್ಷಿತ, ಸೇರಿಂದತೆ ರೈನ್ಬೋ ಮಕ್ಕಳ ಆಸ್ಪತ್ರೆಯ ತಂಡವು ಸಂಪೂರ್ಣವಾಗಿ ಮಕ್ಕಳಲ್ಲಿರುವ ಕಾಯಿಲೆಗಳನ್ನು ಪರಿಕ್ಷಿಸಿ ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿರು ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಪರಿಕ್ಷಿಸಿ ಅದರಲ್ಲಿ ತುರ್ತು ಪರಿಸ್ಥಿತಿಯಲ್ಲಿರು 12 ಮಕ್ಕಳನ್ನು ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಯನ್ನು ನೀಡಲಾಗುವುದು ಎಂದು ವೈದ್ಯರು ನಮ್ಮ ಪ್ರತಿನಿಧಿಗೆ ವಿವರಿಸಿದರು.