ಲೋಕದರ್ಶನ ವರದಿ
ಬಳ್ಳಾರಿ 26: ಮೂರು ದಿನಗಳ ಕಾಲ ಅದ್ದೂರಿ ಹಂಪಿ ಉತ್ಸವಕ್ಕೆ ಒತ್ತಾಯಿಸಿ ಜಿಲ್ಲಾ ಕಲಾವಿದರ ವೇದಿಕೆ, ಕಲಾವಿದರ ವಿವಿಧ ಸಂಘಟನೆಗಳು ಶುಕ್ರವಾರ ನಗರದ ಗಡಗಿ ಚನ್ನಪ್ಪ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಮೈಸೂರು ದಸರಾ ಉತ್ಸವಕ್ಕೆ ಪ್ರೇರಣೆಯಾದ ಹಂಪಿ ಉತ್ಸವವನ್ನು ಸರ್ಕಾರ ಪ್ರತಿ ವರ್ಷ ಕಡೆಗಣಿಸುತ್ತಿರುವುದು ಸರಿಯಲ್ಲ. ವಿಜಯನಗರ ಸಾಮ್ರಾಜ್ಯದ ಗತವೈಭವ, ಕನ್ನಡ ಸಾಹಿತ್ಯ, ಕಲೆ, ಭಾಷೆ, ಸಂಸ್ಕೃತಿ ರಕ್ಷಣೆಗೆ ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.