ಬಳ್ಳಾರಿ: ಕಮಲ ವಿರುದ್ಧ ಕೈ ಮುಖಂಡರ ಪ್ರತಿಭಟನೆ

ಲೋಕದರ್ಶನ ವರದಿ

ಬಳ್ಳಾರಿ 05: ಆಡಿಯೋ ಮೂಲಕ ಮೈತ್ರಿ ಸಕರ್ಾರ ಪತನಗೊಳಿಸಲು ಕುತಂತ್ರ ನಡೆಸಿದ ಬಿಜೆಪಿ ಸರ್ಕಾರದ ಬಣ್ಣ ಬಯಲಾಗಿದ್ದು, ಕೂಡಲೇ ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸಮಿತಿ ನಗರದಲ್ಲಿ ಪತ್ರಿಭಟನೆ ನಡೆಸಿತು. ನಗರದ ಗಡಗಿ ಚನ್ನಪ್ಪ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಎಡಿಸಿ ಮುಖಾಂತರ ರಾಜ್ಯಪಾಲ ವಜುಭಾಯಿಗೆ ಮನವಿ ಸಲ್ಲಿಸಿತು.

ಬಿಜೆಪಿ ಪಕ್ಷದ ಸಭೆಯೊಂದರಲ್ಲಿ ಸಿಎಂ ಬಿಎಸ್ವೈ ಮೈತ್ರಿ ಪಕ್ಷದ ಶಾಸಕರಿಂದ ರಾಜೀನಾಮೆ ಕೊಡಿಸುವಂತೆ ಮಾಡಿ ಸರ್ಕಾರ ಬಿಳಿಸಿದ್ದು ನಾವೆ ಎಂದು ಒಪ್ಪಿಕೊಂಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಮೂಲಕ ರಾಜ್ಯ ಸಕರ್ಾರ ಪ್ರಜಾಪ್ರಭುತ್ವ  ಕಗ್ಗೋಲೆ ಮಾಡಿ ಅಧಿಕಾರಕ್ಕೆ ಬಂದಿರುವುದು ಸಾಬೀತಾಗಿದೆ. 

ಒಂದು ಕ್ಷಣವು ಬಿಜೆಪಿ ಮುಖಂಡರು ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆ ಉಳಿಸಿಕೊಂಡಿಲ್ಲ. ಯಡಿಯೂರಪ್ಪ ಮಾತನಾಡಿದ್ದು, ದೇಶಕ್ಕೆ ಗೊತ್ತಾಗಿದೆ. ಜತೆಗೆ ನಾನೊಬ್ಬನೇ ಸರ್ಕಾರ ಬೀಳಿಸಲಿಲ್ಲ. ಅಮೀತ್ ಶಾ ಮಾರ್ಗದರ್ಶನದಂತೆ ಮಾಡಿದ್ದೇನೆ ಎಂದು ಹೇಳುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಹಾಗೂ ಕೇಂದ್ರ ಗೃಹಸಚಿವ ಅಮೀತ್ ಶಾ ಅವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಬೇಕು ಎಂದು ಕೈ ಮುಖಂಡರು ಆಗ್ರಹಿಸಿದರು.

ಕಾರ್ಯಕರ್ತ ಎಲ್.ಮಾರಣ್ಣ, ವಿವೇಕ, ಪ್ರಭಂಜನ್, ಮಲ್ಲೇಶ್ವರಿ, ಬಿ.ಎಂ.ಪಾಟೀಲ್, ಅರ್ಜುನ್, ಶ್ರೀನಿವಾಸಲು, ಬೆಣಕಲ್ ಬಸವರಾಜ್ಗೌಡ, ರಾಮ್ಪ್ರಸಾದ್ ಸೇರಿ ಮತ್ತಿತರರಿದ್ದರು.