ಬಳ್ಳಾರಿ: ಕನ್ನಡ ನಾಡು ಸಂಸ್ಕೃತಿಯ ನೆಲೆವೀಡು: ವೀರಣ್ಣ

ಬಳ್ಳಾರಿ 25: ತಮ್ಮಭಾಯ್ ಸರ್ಕಲ್, ಕೊರಚರ ಬೀದಿ, ಕೌಲ್ ಬಜಾರ್, ಬಳ್ಳಾರಿಯಲ್ಲಿ   ನಡೆದ  "ಜಾನಪದ ಸಮೂಹ  ನೃತ್ಯ, ಜಾನಪದ ಗಾಯನ ಹಾಗೂ ನಾಟಕ- ರಂಗ ಸಂಗ್ರಮ ಆಲಾಪ್ ಸಂಗೀತ ಕಲಾ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರುರವರ 

ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. 

ರಂಗ ಸಂಗ್ರಮ 2019 ರ ಅಧ್ಯಕ್ಷತೆಯನ್ನು ಆಂಜನೇಯ ಕೆ.ಜಿ.ಪ್ರಾಂಶುಪಾಲರು ಸಕರ್ಾರಿ ಆದರ್ಶ ವಿದ್ಯಾಲಯ ನಾಡೋಜ ಬೆಳಗಲ್ಲು ವೀರಣ್ಣರವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ ಕನ್ನಡ ನಾಡು ಸಂಸ್ಕೃತಿಯ ನೆಲೆವೀಡು, ಈ ನಾಡಿನಲ್ಲಿ ಕಲೆಗೆ, ಕಲಾವಿದರಿಗೆ ಗೌರವ ಸಲ್ಲಿಸಿ ಕಲಾಪೋಷಣೆ  ಮಾಡುತ್ತಾ ರಂಗ ಸಂಗ್ರಮ ಕಾರ್ಯಕ್ರಮವನ್ನು ಕೌಲಬಜರ್ ಬಡವಾಣೆಯಲ್ಲಿ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಿರುವುದು ಅಲಾಪ್ ಸಂಗೀತ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಇವರುಗಳಿಗೆ ಅಭಿನಂದನೆಗಳು ಸಲ್ಲಿಸಿದರು. ಅತಿಥಿ ಸ್ಥಾನ ವಹಿಸಿ ಮಾತನಾಡಿದ ಡಾ.ಕೆ.ಹನುಮಂತಪ್ಪ  ಕೆ.ಚನ್ನಪ್ಪ, ಗೌರವ ಅಧ್ಯಕ್ಷರು, ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ ರವರ ಮಾರ್ಗದರ್ಶನ ಮತ್ತು ಆಶೀವರ್ಾದದೂಂದಿಗೆ ರಮಣಪ್ಪ ಬೆಳೆದು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು. 

ವೇದಿಕೆಯ ಮೇಲೆ ಕೆ.ಚನ್ನಪ್ಪ, ಗೌರವ ಅಧ್ಯಕ್ಷರು, ರಾಘವ ಮೆಮೋರಿಯಲ್ ಅಸೋಸಿಯೇಷನ್, ರಮೇಶ್ ಗೌಡ ಪಾಟೀಲ್ ರಂಗಭೂಮಿ  ಕಲಾವಿದರು, ಕಪ್ಪಗಲ್ಲು ಪ್ರಭುದೇವ ಸದಸ್ಯರು ಕರ್ನಾಟಕ ನಾಟಕ ಅಕಾಡೆಮಿ, ಶಿವೇಶ್ವರಗೌಡ ಕಲ್ಲುಕಂಬ ರಂಗ ಸಮಾಜ ಸದಸ್ಯರು, ರಾಧಾಕೃಷ್ಣ, ರಮಣಪ್ಪ ಭಜಂತ್ರಿ, ಅಧ್ಯಕ್ಷರು, ಆಲಾಪ್ ಸಂಗೀತ ಕಲಾ ಟ್ರಸ್ಟ್ ಕೆ.ಸುರೇಶ ಕಾರ್ಯದಶರ್ಿ ಅಲಾಪ್ ಸಂಗೀತ ಕಲಾ ಟ್ರಸ್ಟ್ ಭಾಗವಹಿಸಿದ್ದರು. 

    ಕಾರ್ಯಕ್ರಮದ ನಿರೂಪಕಿಯಾಗಿ ವೀಣಾ ಆರ್.ಸರ್ಕಾರಿ ಆದರ್ಶ ವಿದ್ಯಾಲಯ, ನಿರ್ವಹಿಸಿದರು. ಎಂ.ಗೋವಿಂದ ರಾಜಲು ಮಾಜಿ ಸದಸ್ಯರು ಮಹಾನಗರ ಪಾಲಿಕೆ, ಇವರಿಗೆ ಟ್ರಸ್ಟ್ ವತಿಯಿಂದ ಸನ್ಮಾನಸಲಾಯಿತು. ನೃತ್ಯ ಗುರುಗಳಾದ ಅಭಿಷೇಕ,ವಿ.ರಾಮ ಚಂದ್ರ, ಹಿರಿಯ ರಂಗಭೂಮಿ ಕಲಾವಿದ ವೆಂಕೊಬಚಾರ್ಯ ಇವರಿಗೆ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು. ಟ್ರಸ್ಟ್ ಸದ್ಯಸರಾದ ಕೆ.ಸುಜಾತ,ಕೆ. ಅನುರಾಧ, ಕೆ.ಕ್ರಿಷ್ಣ, ಬಿ.ಲಿಂಗಣ್ಣ ಹಾಗೂ ಮಯೂರ ಕಲಾ ಸಂಘದ ಕೆ.ಮಲ್ಲೆಶಪ್ಪ, ಗಂಗಣ್ಣ ಮತ್ತು ಬಿಸಲಹಳ್ಳಿ ಬಸವರಾಜ್, ಸುಬ್ಬಣ್ಣ, ಹೊನ್ನೂರಸ್ವಾಮಿ, ಹೆಚ್.ಕೆ.ಹೆಚ್.ಹನುಮಂತ. ಅಣ್ಣಾಜಿ ಕ್ರಿಷ್ಣರೆಡ್ಡಿ.ಕೆ.ಶ್ರೀನಿವಾಸ, ಕೆ.ರಂಗಸ್ವಾಮಿ, ಶಂಕರಬಂಡೆ ವೆಂಕಟೇಶ, ಕಲಾಭಿಮಾನಿಗಳು ಭಾಗವಹಿಸಿದ್ದರು.