ಬಳ್ಳಾರಿ: ಆರೋಗ್ಯ ಇಲಾಖೆಯ ಸುಧಾರಣೆಗೆ ಸಚಿವ ಶ್ರೀರಾಮುಲು ಕ್ರಮ

ಲೋಕದರ್ಶನ ವರದಿ

ಬಳ್ಳಾರಿ 05: ಇನ್ನೇರಡು ದಿನಗಳಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಸಭೆ ಕರೆಯಲಾಗುತ್ತಿದ್ದು, ಸಭೆಯಲ್ಲಿ ಆರೋಗ್ಯ ಇಲಾಖೆಯ ಸಮಗ್ರ ಸುಧಾರಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು. 

ಜಿಲ್ಲಾಸ್ಪತ್ರೆ ಆವರಣದಲ್ಲಿ ರೋಟಾ ವೈರಸ್ ಲಸಿಕಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 2009ರಲ್ಲಿ ಇದೇ ಆರೋಗ್ಯ ಇಲಾಖೆಯ ಮಂತ್ರಿಗಳಾಗಿ ಆಂಬ್ಯುಲೆನ್ಸ್ ಸೇವೆ ಸೇರಿದಂತೆ ನಾನಾ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಬಡಜನರ ಆರೋಗ್ಯ ಸೇವೆಗೆ ಶ್ರಮಿಸಿರುವುದನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೇ ನನಗೆ ಈ ಖಾತೆಯ ಜವಾಬ್ದಾರಿಯನ್ನು ಒದಗಿಸಿದ್ದಾರೆ. 

ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವೆ. ಖಾತೆ ಹಂಚಿಕೆಯ ವಿಷಯದಲ್ಲಿ ಯಾವುದೇ ರೀತಿಯ ಅಸಮಾಧಾನ ನನನಾಗಿಲ್ಲ ಎಂಬುದನ್ನು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಆರೋಗ್ಯ ಇಲಾಖೆಯ ಸಮಗ್ರ ಸುಧಾರಣೆ ಮತ್ತು ಬಡವರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಆಶಾ ಮತ್ತು ಸ್ಟಾಪ್ ನರ್ಸ್ ಗಳ ಬಾಕಿ ಇರುವ ವೇತನವನ್ನು ಎರಡು ದಿನಗಳಲ್ಲಿ ಒದಗಿಸಲಾಗುವುದು ಎಂದು ಹೇಳಿದ ಸಚಿವ ಬಿ.ಶ್ರೀರಾಮುಲು ಅವರು ಮತ್ತೆ ಮಡಿಲು ಕಿಟ್ ಸ್ಕೀಂ ಆರಂಭಿಸುವುದಕ್ಕೆ ಸಂಬಂದಿಸಿದಂತೆ ಚಚರ್ಿಸಿ ಕ್ರಮಕೈಗೊಳ್ಳಲಾಗುವುದು ಎಂದರು. 

ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತಿತರರು ಇದ್ದರು.