ಲೋಕದರ್ಶನ ವರದಿ
ಬಳ್ಳಾರಿ 25: ನೋಟರಿಯವರ ಸೇವೆ ನ್ಯಾಯಾಂಗ ಮತ್ತು ಸರ್ಕಾರಕ್ಕೆ ಸಲ್ಲುವ ಅಪೂರ್ವ ಕೊಡುಗೆಯಾಗಿದೆ. ಇದು ಪವಿತ್ರವಾದ ಹುದ್ದೆಯಾಗಿದ್ದು ಸಾರ್ವಜನಿಕರಿಗೆ ಸದುಪಯೋಗವಾಗಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಖಾಸೀಂ ಚೂರಿಖಾನ್ ಅವರು ಹೇಳಿದರು. ಜಿಲ್ಲಾ ಗೌರವಾನ್ವಿತ ನೋಟರಿಗಳ ವೇದಿಕೆ ಮತ್ತು ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ವತಿಯಿಂದ ಇತ್ತಿಚೆಗೆ ನಗರದ ಕೋರ್ಟ ಆವರಣದಲ್ಲಿ ಆಯೋಜಿಸಿದ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯಧೀಶರ ಈ ಕಾರ್ಯ ನಿರ್ವಹಣೆಯ ವ್ಯಾಪ್ತಿ ಹೆಚ್ಚಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್.ಮಲ್ಲೂರು ಮಾತನಾಡಿ, ನೋಟರಿಯವರ ಜವಾಬ್ದಾರಿಯು ಪಬ್ಲಿಕ್ ಅಫೀಷಿಯಲ್ ಅಧಿಕಾರಿ ಎಂದರು.
ಈ ಸಂದರ್ಭದಲ್ಲಿ ನೋಟರಿ ಅಸೋಸಿಯೇಷನ್ನ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಅಖಿಲ ಭಾರತ ನೋಟರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಆಸಿಫ್ ಅಲಿ, ಕೆ.ಚನ್ನಪ್ಪ, ಡಾ.ಎಚ್. ರಾಘವೇಂದ್ರಚಾರ್ ಅವರು ಮಾತನಾಡಿದರು. ವಕೀಲರಾದ ಬಿ.ರಾಘವೇಂದ್ರ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರು ಸೇರಿದಂತೆ ಇತರರು ಇದ್ದರು.