ಲೋಕದರ್ಶನ ವರದಿ
ಬಳ್ಳಾರಿ 19: ಒಬ್ಬರ ಮೇಲೆ ಇನ್ನೊಬ್ಬರು ದೋಷ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಬೇಡ; ಪ್ರವಾಹದಿಂದ ಬಾಧಿತರಾಗಿರುವ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಟ್ಟು ಅವರ ಬಾಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ, ಈ ಮೂಲಕ ಸರಕಾರದ ಆಶಯ ಈಡೇರಿಸಿ ಎಂದು ಶಾಸಕರು ಆಗಿರುವ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2009ರಲ್ಲಿ ಪ್ರವಾಹದಿಂದ ಬಾಧಿತರಾದ ಸಂತ್ರಸ್ತರಲ್ಲಿ ಕೆಲವರಿಗೆ ಮಾತ್ರ ಮನೆಗಳನ್ನು ಒದಗಿಸಿಕೊಟ್ಟು; ಇನ್ನೂ ಕೆಲ ಸಂತ್ರಸ್ತರಿಗೆ ಮನೆಗಳನ್ನು ಒದಗಿಸದಿರುವುದನ್ನು ನೋಡಿದರೇ ಈ ವಿಷಯದಲ್ಲಿ ಕಂದಾಯ ಇಲಾಖೆ, ಜಿಪಂ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಮಧ್ಯೆ ಸಮನ್ವಯ ಇರದಿರುವುದು ಗೊತ್ತಾಗುತ್ತದೆ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು ದಾನಿಗಳ ಎಲ್ಲ ಮನೆಗಳು ಪೂರ್ಣಗೊಂಡಿವೆ. ಆದರೇ ಕೊಳಗೇರಿ ಅಭಿವೃದ್ಧಿ ಮಂಡಳಿ ನಿಮರ್ಿಸುತ್ತಿದ್ದ ಮನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದರು.
775 ಮನೆಗಳು ಛಾವಣಿವರೆಗೆ ಬಂದಿದ್ದು,ಅವುಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಿಕೆ ಹಾಗೂ ಇನ್ನೀತರ ಮೂಲಸೌಕರ್ಯಗಳು ಕಲ್ಪಿಸಬೇಕಿದೆ. ಮೈನಿಂಗ್ ಮಾಲೀಕರು ನಿರ್ಮಾಸಲು ಉದ್ದೇಶಿಸಿದ್ದ ಮನೆಗಳಲ್ಲಿ ಶೇ.80ರಷ್ಟು ಪೂರ್ಣವಾಗಿವೆ. ಉಳಿದವುಗಳನ್ನು ನಾವೇ ನಿರ್ಮಾಸಬೇಕಿದೆ. ಮನೆಗಳ ನಿರ್ಮಾಣ ಕಾರ್ಯ ಆರಂಭವಾಗದಿರುವ ಕಡೆ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಸಲು ನಿಗದಿಪಡಿಸಿದ ಹಣ ಸಂತ್ರಸ್ತ ಫಲಾನುಭವಿ ಒಪ್ಪಿಗೆ ಬಯಸಿದಲ್ಲಿ ಅವರಿಗೆ ವಿತರಿಸಿ ತನ್ನ ಒಂದಿಷ್ಟು ದುಡ್ಡು ಹಾಕಿ ಅವರು ಮನೆ ನಿರ್ಮಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ನಕುಲ್ ಸಭೆಗೆ ವಿವರಿಸಿದರು.
ಸಮಗ್ರ ವರದಿ 20 ದಿನದೊಳಗೆ ನೀಡಲು ಸೂಚನೆ:
ಅಚ್ಚೊಳ್ಳಿ 598 ಮನೆಗಳ ದುರಸ್ತಿ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ, ಛಾವಣಿ ಹಂತಕ್ಕೆ ಬಂದಿರುವ 775 ಮನೆಗಳ ಸೌಕರ್ಯ ಕಲ್ಪಿಸುವಿಕೆ, ತಳಪಾಯ ಹಂತದಲ್ಲಿರುವ 388 ಮನೆಗಳ ನಿರ್ಮಾಣ, ಆರಂಭವಾದ ಮನೆಗಳ ನಿರ್ಮಾಣ ಕಾರ್ಯಕ್ಕೆ ಕ್ರಮಕೈಗೊಳ್ಳುವುದು, ಜಿಲ್ಲೆಯಲ್ಲಿರುವ ಪ್ರವಾಹಪೀಡಿತ ಗ್ರಾಮಗಳು, ಪ್ರವಾಹ ಎದುರಾದ ಸಂದರ್ಭದಲ್ಲಿ ತೊಂದರೆಯಾಗುವ ಗ್ರಾಮಗಳು, ಸಂತ್ರಸ್ತರ ಪ್ರಮಾಣ, ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಬೇರೆಡೆ ನಿಮರ್ಿಸಬಹುದಾದ ಮನೆಗಳ ವಿವರ ಸೇರಿದಂತೆ ಸಮಗ್ರ ವಿವರನ್ನು ಅಂದಾಜುಪಟ್ಟಿ ಸಮೇತ ಒದಗಿಸುವಂತೆ ಜಿಲ್ಲಾಧಿಕಾರಿ ನಕುಲ್, ಕೊಳಚೆ ಅಭಿವೃದ್ಧಿ ಮಂಡಳಿ ಆಯುಕ್ತರಿಗೆ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ನಿರ್ದೇಶನ ನೀಡಿದರು.
ಸಮಗ್ರ ವಿವರ ಬಂದ ನಂತರ ಜ.20ರೊಳಗೆ ಕಂದಾಯ, ವಸತಿ ಕಾರ್ಯದಶರ್ಿಗಳು ಮತ್ತು ಜಿಲ್ಲಾಧಿಕಾರಿಗಳು,ಜಿಪಂ ಸಿಇಒ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಮತ್ತು ಐದಾರು ತಿಂಗಳಲ್ಲಿ ಸಂತ್ರಸ್ತರಿಗೆ ಮನೆ ದೊರಕಿಸಿಕೊಡಲಾಗುವುದು ಎಂದರು.
ಮನೆಗಳ ನಿಮರ್ಾಣಕ್ಕೆ ಸ್ಥಳದ ಕೊರತೆ ಇಲ್ಲ;
ಆದರೇ ಸಮನ್ವಯದ ಕೊರತೆಯಿಂದ ಸಂತ್ರಸ್ತರಿಗೆ ಮನೆಗಳು ಒದಗಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು ಸಮನ್ವಯ ಸಾಧಿಸಿ ಕೆಲಸ ಮಾಡಿ ಎಂದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಶಾಸಕರಾದ ಸಂಜೀವ ಮಂಟದನೂರು, ಕರುಣಾಕರರೆಡ್ಡಿ, ಸಿದ್ದು ಸವದಿ, ಪ್ರಾಣೇಶ, ಅನಿಲ್ ಚಿಕ್ಕಮಾದು,ನಾಗಣಗೌಡ ಕಂದಕೂರು, ಶ್ರೀಕಾಂತ್ ಪೊಟ್ನೇಕರ್, ಸ್ಥಳೀಯ ಶಾಸಕ ಸೋಮಲಿಂಗಪ್ಪ, ವಿಧಾನಸಭಾ ಸಚಿವಾಲಯದ ಉಪಕಾರ್ಯದರ್ಶಿ ಪರಶಿವಮೂರ್ತಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿ ಮಹಾದೇವ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರು ಹಾಗೂ ನಿರ್ದೇಶಕರು, ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಮತ್ತಿತರರು ಇದ್ದರು.