ಬಳ್ಳಾರಿ: ಇಂದು ಎನ್ಆರ್ ಸಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಬಳ್ಳಾರಿ 23: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ತುಘಲಕ್ ಆಡಳಿತ ನಡೆಸುತ್ತಿದ್ದು, ತತ್ಪರಿಣಾಮವೇ ವಿರೋಧದ ನಡುವೆ ಎನ್ಆರ್ಸಿ, ಸಿಎ ಕಾಯ್ದೆ ಜಾರಿ ತಂದಿದ್ದಾರೆ. ಇದನ್ನು ವಿರೋಧಿಸಿ ಡಿ.24ರಂದು ಬಳ್ಳಾರಿ ನಗರದಲ್ಲಿ ಜಿಲ್ಲಾ ನಾಗರೀಕ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಸಯ್ಯದ್ ನಾಸೀರ ಹುಸೇನ್ ಹೇಳಿದರು. 

ನಗರದ ಬುಡಾ ಪಾರ್ಕ ನಿಂದ ಪ್ರತಿಭಟನೆ ಆರಂಭಿಸಿ, ಮೆರವಣಿಗೆ ಮೂಲಕ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಡಿಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಕಾಂಗ್ರೆಸ್ ಸೇರಿ ಎಡಪಕ್ಷಗಳು ಧರ್ಮದ ಆಧಾರದ ಮೇಲೆ ಪೌರತ್ವ ಕೊಡಿ ಎಂದು ಎಲ್ಲಿಯೂ ಹೇಳಿಲ್ಲ. ಮೋದಿ ಅವರು, ನೋಟು ಅಮಾನೀಕರಣ ವಿಚಾರದಲ್ಲೂ ಇದೇ ರೀತಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದ್ದರು. ಮೋದಿ, ಅಮಿತ್ ಷಾ ಎಲ್ಲಾ ವಿಚಾರದಲ್ಲೂ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ.ಎನ್ಆರ್ಸಿ, ಸಿಎ ಕಾಯ್ದೆಯ ವಿಷಯದಲ್ಲಿಯೂ ಜನರನ್ನು ಯಮಾರಿಸಿ ವಿರೋಧ ಪಕ್ಷಗಳ ಅಭಿಪ್ರಾಯ ಆಲಿಸದೇ ಕಾಯ್ದೆ ಜಾರಿಗೊಳಿಸಲಾಗಿದೆ. ಹೀಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರತಿಭಟನೆಗೆ ವಿವಿಧ ಪಕ್ಷಗಳು, ಸಂಘಟನೆಗಳು ಬೆಂಬಲ ಕೊಡುತ್ತಿವೆ. ಜಾಮಿಯಾದಿಂದ ಮಂಗಳೂರಿನವರೆಗೆ ನಡೆದ ಎಲ್ಲ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿವೆ. ಎಲ್ಲ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸಬೇಕು.ಕೇಂದ್ರ ಸಕರ್ಾರದ ವಿರುದ್ಧ ಮಾತನಾಡುವರವ ಮೇಲೆ ಕೇಸ್ ಹಾಕುತ್ತಿದ್ದಾರೆ. ನಾವು ಪ್ರಜಾತಂತ್ರಾತ್ಮಕ ವ್ಯವಸ್ಥೆಯಲ್ಲಿ ಬದುಕುತ್ತಿದೆವೆಯೇ...? ಎಂಬ ಅನುಮಾನ ಕಾಡಲಾರಂಭಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಎಡಪಂಥಿಯ ಮುಖಂಡರಾದ ನಾಗಭೂಷಣ, ಸೋಮಶೇಖರ್, ವಿಠ್ಠಲ, ಶಿವಶಂಕರ, ಸತ್ಯಬಾಬು, ಅಜರ್ುನ, ಚಂದ್ರಕುಮಾರಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಮಪ್ರಸಾದ, ವೆಂಕಟೇಶ ಹೆಗಡೆ, ದೇವಾನಂದ ಸೇರಿ ಮತ್ತಿತರರು ಇದ್ದರು.