ಬಳ್ಳಾರಿ: ವಿಜ್ಞಾನ ಕೇಂದ್ರದಲ್ಲಿ ಸೂರ್ಯಗ್ರಹಣ ವೀಕ್ಷಣೆ

ಲೋಕದರ್ಶನ ವರದಿ

ಬಳ್ಳಾರಿ 26: ಕಂಕಣ ಸೂರ್ಯಗ್ರಹಣದ ನಿಮಿತ್ತ ಸೂರ್ಯಗ್ರಹಣದ ವಿವಿಧ ಹಂತಗಳನ್ನು ವೀಕ್ಷಣೆಗಾಗಿ ನಗರದ ಜಿಲ್ಲಾ ಕ್ರೀಡಾಂಗಣದ ಹತ್ತಿರವಿರುವ ವಿಜ್ಞಾನಕೇಂದ್ರದಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಕಂಕಣ ಸೂರ್ಯಗ್ರಹಣವು ಬೆಳಿಗ್ಗೆ 8 ಗಂಟೆ 6 ನಿಮಿಷಕ್ಕೆ ಸರಿಯಾಗಿ ಗೋಚರವಾಗಿ ಖಗೋಳ ವಿಸ್ಮಯದ ಕುತೂಹಲದ ಕ್ಷಣ ಮೂಡಿಸಿತು.

ನಗರದ ನಿವಾಸಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ವೀಕ್ಷಿಸಿದರು. ನೆರೆದಂತ ಎಲ್ಲಾ ಮಕ್ಕಳಿಗೆ ಗ್ರಹಣ ನೋಡಲು ಕನ್ನಡಕವನ್ನು ಹಾಗೂ ಇತರೆ ಸಾಧನೆಗಳನ್ನು ನೀಡಲಾಗಿತ್ತು.

ಗ್ರಹಣದ ಗೋಚರವಾದ ಸಮಯದಿಂದ ಗ್ರಹಣ ಮುಕ್ತಾಯವಾಗುವವರೆಗೆ ಅಸ್ತಮವಾಗುವವರೆಗೆ ಏನ್ನನು ತಿನ್ನಬಾರದು ಎನ್ನುವ ಮೂಡನಂಬಿಕೆಯನ್ನು ಕಳಚಲು ಅಲ್ಲಿ ಬಂದಂತ ಎಲ್ಲರಿಗೆ ಬಿಸ್ಕಿಟ್ಗಳನ್ನು ವಿತರಿಸಿ ತಿನ್ನಿಸಲಾಯಿತು.

ಗ್ರಹಣದ ಬಗ್ಗೆ ಸಂಪೂರ್ಣ ವಿವರಗಳನ್ನು ಕ್ಯೂರೇಟರ್ ಶಿವರಾಜ್ ಹಾಗೂ ಇನ್ನೀತರರು ತಿಳಿಸಿಕೊಟ್ಟರು.