ಬಳ್ಳಾರಿ: ತೊಗಲುಗೊಂಬೆಯಾಟ ಪ್ರದರ್ಶನ ಶೋಭೆ

ಬಳ್ಳಾರಿ 29: ಗ್ರಾಮಗಳಲ್ಲಿ ಪ್ರಾಚೀನ ಕಾಲದಿಂದಲೂ ಜನಪದ ಕಲೆಗಳನ್ನು ಪ್ರದರ್ಶಿಸಲಾಗುತ್ತಿದ್ದು ಅದರಲ್ಲಿ ಬಯಲಾಟ ಮತ್ತು ತೊಗಲುಗೊಂಬೆಯಾಟಗಳು ಪ್ರಸಿದ್ಧ ಕಲೆಗಳಾಗಿವೆ. ತೊಗಲುಗೊಂಬೆಯಾಟ ಗ್ರಾಮಗಳಿಗೆ ಶೋಭೆಯನ್ನುಂಟು ಮಾಡುತ್ತದೆ ಎಂದು ಬಳ್ಳಾರಿ ತಾಲ್ಲೂಕಿನ ಬೊಬ್ಬಕುಂಟೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಶಿವರಾಮ ತಿಳಿಸಿದರು. 

ಬಳ್ಳಾರಿ ತಾಲ್ಲೂಕಿನ ಬೊಬ್ಬಕುಂಟೆ ಗ್ರಾಮದ ಶಿವ ದೇವಸ್ಥಾನದ ಆವರಣದಲ್ಲಿ ಶಿವಶ್ರೀ ಸಾರ್ವಜನಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇವರ ಪ್ರಾಯೋಜಿತ ಕಾರ್ಯಕ್ರಮದ ಅಡಿಯಲ್ಲಿ  ಬಳ್ಳಾರಿಯ ಎರ್ರಿಸ್ವಾಮಿ ಮತ್ತು ತಂಡದವರು ಹಮ್ಮಿಕೊಂಡಿದ್ದ "ಕಿಷ್ಕಿಂಧ ಕಾಂಡ" ತೊಗಲುಗೊಂಬೆ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 

ನಾವು ನಮ್ಮ ಬಾಲ್ಯದ ದಿನಗಳಲ್ಲಿ ಗ್ರಾಮದಲ್ಲಿ ತೊಗಲುಗೊಂಬೆಯಾಟವನ್ನು ವೀಕ್ಷಿಸುತ್ತಿದ್ದೆವು. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದೆ. ಗ್ರಾಮಸ್ಥರು ತೊಗಲುಗೊಂಬೆಯಾಟವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು. 

  ಈ ಕಾರ್ಯಕ್ರಮದಲ್ಲಿ ಗ್ರಾಮದ ಶಿವಶ್ರೀ ಸಾರ್ವಜನಿಕ ಸೇವಾಟ್ರಸ್ಟ್ನ ಅಧ್ಯಕ್ಷ ಬಿ.ಶಿವರಾಜಗೌಡ, ಗ್ರಾಮದ ಮುಖಂಡರಾದ ತಿಮ್ಮಪ್ಪ, ರಾಮಾಂಜನಿ, ಮುಖಂಡರಾದ ಕೆ.ಎರ್ರಿಸ್ವಾಮಿ, ಕೆ.ದೊಡ್ಡಹನುಮಂತಪ್ಪ, ತೆಲುಗು ದೇವರಾಜ, ಟಿ.ಗಂಗಾಧರ, ಭಾವಿಮನೆ ಹನುಮಂತಪ್ಪ, ಗಿರೇಗೌಡ, ನಿಂಗನಗೌಡ, ಬಾರಿಕರ ಹನುಮಂತಪ್ಪ, ಕಟ್ಟೆಬಸಪ್ಪ ವಾಲ್ಮೀಕಿ ರಆಮದಾಸ, ಭಾವಿಮನೆ ಭೀಮನಗೌಡ ಮುಂತಾದವರು ಹಾಜರಿದ್ದರು.