ಬಳ್ಳಾರಿ: ಜಾನಪದ ರಂಗೋತ್ಸವಕ್ಕೆ ವೈಭವದ ತೆರೆ

ಲೋಕದರ್ಶನ ವರದಿ

ಬಳ್ಳಾರಿ 08: ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಜಾನಪದ ರಂಗೋತ್ಸವಕ್ಕೆ ವೈಭವದ ತೆರೆ ಕಂಡಿತು. ಒಂದು ತಿಂಗಳ ಕಾಲದ ತರಬೇತಿಯನ್ನು ಪಡೆದ ಸುಮಾರು ಹದಿನೈದು ವಿದ್ಯಾಥರ್ಿನಿಯರಿಂದ ಐತಿಹಾಸಿಕ ರೂಪಪಕವಾದ ಮಹಾತ್ಮಾ ಗಾಂಧೀಜಿ ಇವರ ಜೀವನಾಧಾರಿತ ತೊಗಲುಗೊಂಬೆಯಾಟದ ಪ್ರದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸಿದರು. 

ಒಂದು ತಿಂಗಳ ಕಾಲದವರೆಗೆ ರಾಮಾಂನೇಯ ತೊಗಲುಗೊಂಬೆ ಮೇಳದ ನುರಿತ ಯುವ ಕಲಾವಿದರಾದ ಗಂಗಾಧರ್ ದುರ್ಗಂ ಮತ್ತು ಬಿ.ಜಿ. ಸಾಯಿಕುಮಾರ್ ಇವರು ಪ್ರತಿದಿನ ಸಂಜೆ ನಾಲ್ಕು ಗಂಟೆಯಿಂದ ಸುಮಾರ ಆರುಗಂಟೆ ಮೂವತ್ತು ನಿಮಿಷದ ವರೆಗೆ ಪ್ರತಿದಿನ ತರಬೇತಿಯನ್ನು ಕೊಟ್ಟು ವೃತ್ತಿಪರ ಕಲಾವಿದರಿಗೂ ಕಡಿಮೆಯಿಲ್ಲದ ರೀತಿಯಲ್ಲಿ ತರಬೇತಿಯನ್ನು ಕೊಟ್ಟು ತೊಗಲುಗೊಂಬೆಯಾಟದ ಕಲಾವಿದರಾಗಿ ರೂಪುಗೊಂಡಿರುತ್ತಾರೆ. 

ಈ ಶಿಬಿರಾಥರ್ಿಗಳು ನಾಡಿನ ಯಾವುದೇ ಭಾಗದಲ್ಲಿ ಕಾರ್ಯಕ್ರಮ ನೀಡುವಲ್ಲಿ ಸಮರ್ಥರಾಗಿರುತ್ತಾರೆ ಎಂಬುದು ಅವರ ಪ್ರಯೋಗವೇ ಸಾಕ್ಷಿ ಯಾಯಿತು. ಗಾಂಧೀಜಿಯವರ ಜೀವನಗಾಥೆಯ ದಕ್ಷಿಣ ಆಪ್ರಿಕಾದ ಮೋರಿಸ್ ಬರ್ಗ ರೈಲ್ವೇ ನಿಲ್ದಾಣದಲ್ಲಿ ಗಾಂಧೀಜಿಯವರ ಅವಮಾನ ದಕ್ಷಿಣಾಪ್ರಿಕಾದಲ್ಲಿನ ವರ್ಣದ್ವೇಷದ ವಿರುದ್ಧ ಚಳುವಳಿ ಚಂಪಾರಣ್ಯ ರೌಲಟ್ ಕಾಯ್ದೆ ಹಾಗೂ ಜಲಿಯನ್ ವಾಲ ಭಾಗ್ ಅಸಹಕಾರ ಚಳುವಳಿ ಸಾಬರಮತಿ ಆಶ್ರಮ ವಿದೇಶಿವಸ್ತ್ರ ದಹನ ದಂಡಿಯಾತ್ರೆ ಉಪ್ಪಿನ ಸತ್ಯಾಗ್ರಹ 1942 ಚಲೇ ಜಾವ್ ಚಳುವಳಿ ಚೌರಾಚೌರಿ ಪ್ರಕರಣ 1947 ಭಾರತ ಸ್ವಾತಂತ್ರ ಕೊನೆಗೆ ಗಾಂಧೀಜಿ ನಿರ್ಗ ಮನದ ಜೊತೆಗೆ ಕಥಾರೂಪಕವು ಮುಗಿಯುತ್ತದೆ. ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ಶಶಿಕಲಾ ಅಂಗಡಿಯವರು ಮಾತನಾಡುತ್ತಾ 'ತೊಗಲುಗೊಂಬೆಯಾಟದ ಕಲೆಯು ಕೇವಲ ಪ್ರದರ್ಶಕ ಕಲೆಯಾಗಿ ಉಳಿಯದೆ ಪಠ್ಯ ಪುಸ್ತಕಗಳ ಆಕರವಾಗಿ ಶಾಲಾ ಕಾಲೇಜುಗಳಲ್ಲಿ ಪ್ರಚುರಗೊಳ್ಳಬೇಕು' ಎಂದು ನುಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಉಡೇದ ಬಸವರಾಜ್ ಅವರು  ಇಂದಿನ ಆಧುನಿಕ ವಿದ್ಯನ್ಮಾನ ಮಾದ್ಯಮಗಳ ಅಬ್ಬರಗಳ ನಡುವೆ ಸಿಕ್ಕಿ ಮೂಲೆಗುಂಪಾಗುತ್ತಿರುವ ಈ ಕಲಾಪ್ರಕಾರವನ್ನು ಮೊಬೈಲ್ ಯುಗದ ಸವಾಲುಗಳನ್ನು ಮೀರಿ ತೊಗಲುಗೊಂಬೆಯಾಟ ಕಲೆಯು ಉಳಿಯಬೇಕಾದರೆ ವಿದ್ಯಾಥರ್ಿಗಳ ಪಾಲ್ಗೊಳ್ಳುವಿಕೆಯ ಜೊತೆಗೆ ಯಕ್ಷಗಾನ ಕಲೆಯು ಪಡೆದ ಪ್ರಸಿದ್ಧಿಯನ್ನೇ ತೊಗಲುಗೊಂಬೆಯಾಟದ ಕಲೆಗೆ ಒದಗಿಸಬೇಕು. ಅದಕ್ಕಾಗಿ ಬಳ್ಳಾರಿ ಭಾಗದ ಯುವಜನತೆ ಅಪಾರವಾಗಿ ಶ್ರಮಿಸಬೇಕು. ಮುಂದಿನ ದಿನಗಳಲ್ಲಿ ತೊಗಲುಗೊಂಬೆಯಾಟದ ಕಲೆಯ ಬಗೆಗೆ ಹಲವಾರು ವಿಚಾರ ಸಂಕಿರಣಗಳು ಪ್ರಾತ್ಯಕ್ಷಿಕೆಗಳು ಕಲಾಪ್ರದರ್ಶನಗಳನ್ನು ಏರ್ಪಡಿಸಲು ವೀರಶೈವ ವಿದ್ಯಾವರ್ಧಕಸಂಘವು ಬೆಂಬಲವನ್ನು ನೀಡುತ್ತದೆ. ಎಂದು ನುಡಿದರು. 

ಕಾರ್ಯಕ್ರಮದ ಮಧ್ಯದಲ್ಲಿ ತರಬೇತಿ ನೀಡಿದ ಗಂಗಾಧರ್ದುರ್ಗಂ ಬಿ.ಜಿ. ಸಾಯಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹೀಗೆ 2019 ಹಾಗೂ 2020 ನೇ ಸಾಲಿನ ಕ್ರಿಯಾಯೋಜನೆಯ ಅನ್ವಯ ಶ್ರೀರಾಮಾಂಜನೇಯ ತೊಗಲುಗೊಂಬೆ ಟ್ರಸ್ಟ್(ರಿ)ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿದರ್ೇಶನಾಲಯ ಬೆಂಗಳೂರು ವಿಶೇಷ ಘಟಕ ಯೋಜನೆಯಡಿಯಲ್ಲಿ ರಾಷ್ಟ್ರೀಯ ಜಾನಪದ ರಂಗೋತ್ಸವು ಅತ್ಯಂತ ಅದ್ದೂರಿಯಾಗಿ ಯಶಸ್ವಿಯಾಗಿ ಕೊನೆಗೊಂಡಿತು.