ಲೋಕದರ್ಶನ ವರದಿ
ಬಳ್ಳಾರಿ 30; ಕನ್ನಡ ಭಾಷೆ ನಮ್ಮ ನಾಡಿನ ಹೊಸ್ತಿಲ ಭಾಷೆ ಅಧಿಕಾರಯುತ ಭಾಷೆ ಆಗಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ. ಕೊಟ್ರಪ್ಪ ಕರೆ ನೀಡಿದ್ದಾರೆ.
ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ `ಕರ್ನಾಟಕ ರಾಜ್ಯೋತ್ಸವ'ವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಸಾಮಥ್ರ್ಯ ಚರ್ಚಿಸುವ ತರ್ಕಸುವ ಮನಸ್ಥಿತಿ ರೂಢಿಸಿಕೊಳ್ಳಬೇಕು, ವಿಷಯವನ್ನು ಅರ್ಥ್ಯಸಿಕೊಂಡು ವಿಶ್ಲೇಷಿಸುವ ಕುತೂಹಿಸಿ ಮನಸ್ಸನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿ ಜೀವನದಲ್ಲಿ ಮಹತ್ತರವಾದುದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡಿಗರು ಪರಭಾಷಿಕರು - ಹೊರ ರಾಜ್ಯದವರನ್ನು ಕನ್ನಡಭಾಷೆಯಲ್ಲೇ ಮಾತನಾಡಿಸಿ, ಕನ್ನಡದಲ್ಲೇ ವ್ಯವಹರಿಸುವಂತೆ ಆಗಬೇಕು. ಪರಭಾಷಿಕರು ಕನ್ನಡ ಭಾಷೆಯ ಜ್ಞಾನದ ಕೊರತೆ, ಪದ ಬಳಕೆಯ ಮಹತ್ವ ತಿಳಿಯದೇ ಇರುವ ಕಾರಣ ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದಾರೆ. ಆದರೆ ಕನ್ನಡಿಗರು ಅಂಥವರಿಗೆ ಭಾಷೆಯ ಮಹತ್ವ, ಪದದ ಅರ್ಥ, ಭಾವನೆಗಳ ವ್ಯಕ್ತಪಡಿಸುವಿಕೆಯ ಕುರಿತು ತಿಳಿಹೇಳಿ ಕನ್ನಡ ಕಲಿಸಬೇಕು ಎಂದರು.
ದ.ರಾ.ಬೇಂದ್ರೆ, ತರಾಸು, ಕಯ್ಯಾರ ಕಿಯ್ಯಣ್ಣರೈ, ಬಿಜಿಎಲ್ ಸ್ವಾಮಿ, ಟಿ.ಎಸ್. ವೆಂಕಣ್ಣಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರರು, ಮತ್ತಿತರ ಸಾಹಿತಿಗಳು ಕನ್ನಡ ಸಾಹಿತ್ಯದಲ್ಲಿ ಮೇರು ಸಾಧನೆ ಮಾಡಿರುವ ಕನ್ನಡೇತರ ಮಾತೃಭಾಷಿಕರು ಇಂಥಹ ಕವಿಗಳ ಸಾಹಿತ್ಯ ಪೂರಕವಾಗಿದೆ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಕೋಳೂರು ಮಲ್ಲಿಕಾರ್ಜುನಗೌಡ, ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಎಚ್.ಎಂ.ಕೊಟ್ರಯ್ಯ, ಪತ್ರಕರ್ತ ಎಚ್ಎಂ.ಮಹೇಂದ್ರ, ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸತೀಶ್ ಎ.ಹಿರೇಮಠ್ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿ ರಮೀಜ ಸ್ವಾಗತಿಸಿದರು. ಉಪನ್ಯಾಸಕ ಎನ್.ಜಿ.ಜಯಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿನಿ ರಂಜಿತ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು ಕನ್ನಡ ನಾಡು ನುಡಿ, ಸಂಸ್ಕೃತಿ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶನ ಮಾಡಿದರು.