ಲೋಕದರ್ಶನ ವರದಿ
ಬಳ್ಳಾರಿ 29: ವಾಹನಗಳಿಗೆ ಇಂಧನವನ್ನು ಬಳಸುವಾದ ಶುದ್ಧವಾದ ಉತ್ತಮವಾದ ಇಂಧನವನ್ನು ಬಳಸಬೇಕು. ಕಲಬೆರೆಕೆ ಇಂಧನವನ್ನು ವಾಹನಗಳಿಗೆ ಬಳಸುವುದರಿಂದ ಭಯಂಕರವಾದ ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಂಧನದ ಕುರಿತು ಜಾಗ್ರತರಾಗಬೇಕೆಂದು ಕಲಬುರ್ಗಿ ವಿಭಾಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಎಂ.ಪಿ.ಓಂಕಾರೇಶ್ವರಿ ತಿಳಿಸಿದರು.
ಗುಗ್ಗರಹಟ್ಟಿ ಪ್ರದೇಶದಲ್ಲಿ ಉಜ್ಜಿನಿ ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಸನ್ಮಾರ್ಗ ಗೆಳೆಯರ ಬಳಗ, ಶ್ರೀ ಮಂಜುನಾಥ ಲಲಿತ ಕಲಾ ಬಳಗ ಇವರ ಸಂಯುಕ್ತಾಶ್ರಯಲ್ಲಿ ಆಯೋಜಿಸಲಾಗಿದ್ದ "ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ" ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಾಹನಗಳಿಂದ ಹೊರಸೂಸುವ ಮಾಲಿನ್ಯದ ಬಗ್ಗೆ ನಾವು ಗಮನಿಸುತ್ತೇವೆ. ಅದರಿಂದ ಅನೇಕ ಅನಿಲಗಳು ಹೊರಬಂದು. ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಪರಿಣಾಮ ಭಯಂಕರ ರೋಗಗಳು ಹರಡುತ್ತವೆ. ಅದರಲ್ಲೂ ಕಣ್ಣಿಗೆ ಕಾಣದ ಕಣಗಳು ಇರುತ್ತವೆ. ಅವು ಬಟ್ಟೆ ಮತ್ತು ಚರ್ಮದಲ್ಲಿ ಹರಡಿರುತ್ತವೆ ಎಂದು ಹೇಳಿದರು.
ಪಾಶ್ಚಾತ್ಯರಲ್ಲಿ ಸಾರಿಗೆ ಪರಿಕಲ್ಪನೆಯೇ ವಿಶಿಷ್ಟವಾಗಿದೆ. ವೈಯಕ್ತಿಕ ವಾಹನದ ಬಳಕೆಗಿಂತ ಸಮೂಹ ವಾಹನದ ಬಳಕೆ ಕಂಡು ಬರುತ್ತದೆ. ಭಾರತದಲ್ಲಿಯೂ ಸೈಕಲ್ ಬಳಕೆ ಹೆಚ್ಚಾಗಬೇಕು. ಇದರಿಂದ ವಾಯುಮಾಲಿನ್ಯ ನಿಯಂತ್ರಿಸಬಹುದು ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ ನಗರ ಪ್ರದೇಶಗಳಲ್ಲಿ ವಿದ್ಯುತ್ಚಾಲಿತ ವಾಹನಗಳು ಬಳಕೆಯಲ್ಲಿದ್ದು, ಇವುಗಳು ಪರಿಸರ ಸ್ನೇಹಿಯಾಗಿವೆ. ಇದಕ್ಕೆ ಸಾರಿಗೆ ಇಲಾಖೆಯು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಬಳ್ಳಾರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜಪ್ಪ, ಆರ್.ಟಿ.ಓ.ಗಳಾದ ಶ್ರೀಧರ್ ಕೆ.ಮಲ್ಲಾಡ, ಬಳ್ಳಾರಿ ಗ್ರಾಮಾಂತರ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್, ಪಿಎಸ್ಐ ವೈ.ಎಸ್. ಹನುಮಂತಪ್ಪ, ಆರ್.ಟಿ.ಓ ಇನ್ಸ್ಪೆಕ್ಟರ್ಗಳಾದ ವೆಂಕಟೇಶ್ವರರಾವ್, ನಿವೃತ್ತ ಪ್ರಾಚಾರ್ಯರಾದ ಪ್ರಸಾದ್ರೆಡ್ಡಿ, ಬಸರಕೋಡು ಶಾಲೆಯ ಮುಖ್ಯೋಪಾಧ್ಯಾಯರಾದ ಮೆಹತಾಬ್, ಕಾಲೇಜು ಪ್ರಾಚಾರ್ಯರಾದ ಶ್ರೀಶೈಲ, ಹಾಸ್ಯ ಕಲಾವಿದರಾದ ಎ.ಎರ್ರಿಸ್ವಾಮಿ, ಮಂಜುನಾಥ ಲಲಿತ ಕಲಾ ಬಳಗದ ಅಧ್ಯಕ್ಷ ಗೋವಿಂದವಾಡ ಮಂಜುನಾಥ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಬಿ.ಚಂದ್ರಶೇಖರ್ ಆಚಾರ್, ಎನ್.ಎಸ್.ಎಸ್. ಅಧಿಕಾರಿ ಮಹೇಶ್, ಶಿಕ್ಷಕರಾದ ಸತ್ಯನಾರಾಯಣ, ಕೆ.ಎಂ.ಬಸವರಾಜ್ ಹಾಜರಿದ್ದರು. ಚಿತ್ರಕಲಾ ಸ್ಪಧರ್ೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಯಿತು. ಆರಂಭದಲ್ಲಿ ಎಸ್.ಪಿ.ಹೊಂಬಳ್ ಅವರು ಪ್ರಾಥರ್ಿಸಿದರು.