ಬಳ್ಳಾರಿ: ಅಯೋಡಿನ್ ಕೊರತೆ ನಿಯಂತ್ರಣ ಸಪ್ತಾಹ ಆಚರಣೆ

ಬಳ್ಳಾರಿ 26: ಆಹಾರದಲ್ಲಿ ಅಯೋಡಿನ್ ಯುಕ್ತ ಪದಾರ್ಥಗಳ ಕಡಿಮೆ ಬಳಕೆಯಾಗುತ್ತಿದ್ದು, ಇದರಿಂದ ಮಕ್ಕಳು,ಗರ್ಭಿಣಿ ಹಾಗೂ ವಯಸ್ಕರಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಮರಿಯಂಬಿ ಹೇಳಿದರು.

ನಗರದ ಕುಲ್ಮಿಚೌಕ್ನ ಗೌಸಿಯಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ ಆಯೋಡಿನ್ ಕೊರತೆಯ ನಿಯಂತ್ರಣ ಹಾಗೂ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾಮಾನ್ಯವಾಗಿ ಒಂದು ದಿನಕ್ಕೆ ವಯಸ್ಕರಿಗೆ 150 ಮೈಕ್ರೋಗ್ರಾಂ, ಗರ್ಭಿಣಿ ಬಾಣಂತಿಯರಿಗೆ 200 ಮೈಕ್ರೋಗ್ರಾಂ, 0-11 ತಿಂಗಳ ಮಕ್ಕಳಿಗೆ 50 ಮೈಕ್ರೋಗ್ರಾಂ, 12-59 ತಿಂಗಳ ಮಕ್ಕಳಿಗೆ 90 ಮೈಕ್ರೋಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ 120 ಮೈಕ್ರೋಗ್ರಾಂ ಬೇಕಾಗುತ್ತದೆ ಎಂಬುದನ್ನು ವಿವರಿಸಿದರು. ಹಾಲು, ಮೊಟ್ಟೆ, ಕ್ಯಾರೆಟ್, ಹಸಿರು ತರಕಾರಿಗಳು, ಸೀಗಿಡಿ, ಮೀನು, ಹಣ್ಣುಗಳು, ಸ್ಪೀನ್ಯಾಚ್, ಅಯೋಡಿನ್ ಯುಕ್ತ ಉಪ್ಪುಗಳನ್ನು ತಪ್ಪದೇ ಸೇವಿಸಬೇಕು ಎಂದರು.

ಗೌಸಿಯಾ ಪ್ರೌಢಶಾಲೆಯ ಮುಖ್ಯಗುರು ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಉಪನ್ಯಾಸ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ನಿರೂಪಿಸಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಸಯ್ಯದ್ ಅಕ್ತರ್ ಪಾಷಾ, ಗೋವಿಂದಪ್ಪ ವಿಜಯಲಕ್ಷ್ಮಿ, ಸಹ ಶಿಕ್ಷಕರಾದ ಮಾಲತಿ, ರಜೀಯಾ,  ಹಾಗೂ ಆಶಾ ಕಾರ್ಯಕತರ್ೆಯರು ಮತ್ತು ಅಂಗನವಾಡಿ ಕಾರ್ಯಕತರ್ೆಯರು ಸೇರಿದಂತೆ ಶಾಲಾ ಮಕ್ಕಳು ಮತ್ತು ಇತರರು ಹಾಜರಿದ್ದರು.