ಲೋಕದರ್ಶನ ವರದಿ
ಬಳ್ಳಾರಿ 30: ಹೈದ್ರಾಬಾದನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗಳಿಗೆ ತಕ್ಷಣವೇ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ 30 ರಂದು ಎಬಿವಿಪಿಯಿಂದ ರಾಷ್ಟ್ರಾದಾದ್ಯಂತ ಹೋರಾಟ ನಡೆಸಿದರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹೈದ್ರಾಬಾದ್ನಲ್ಲಿ ಪಶುವೈದ್ಯೆ ಪ್ರೀಯಂಕಾ ರೆಡ್ಡಿಯವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೀವಂತವಾಗಿ ದಹನ ಮಾಡಿ ಕೊಲೆ ಮಾಡಿದ ಘಟನೆಯನ್ನು ಕಟುವಾಗಿ ಖಂಡಿಸುತ್ತದೆ. ಮತ್ತು ಈ ಕ್ರೂರ ಘಟನೆಗೆ ಕಾರಣರಾದವರಿಗೆ ತಕ್ಷಣವೇ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸುತ್ತದೆ. ಈ ಘಟನೆ ನಡೆದು ಎರಡು ದಿನಗಳವರೆಗೆ ತನಿಖೆಯನ್ನು ಚುರುಕುಗೊಳಿಸದ ಪೋಲೀಸರ ನಡೆ ಮತ್ತು ಸುರಕ್ಷೆತೆ ವೈಫಲ್ಯಕ್ಕೆ ಕಾರಣವಾಗಿದೆ.
ತೆಲಂಗಾಣದ ಗೃಹಮಂತ್ರಿಗಳು ನೀಡಿದ ಹೇಳಿಕೆಯು ಅವರ ಕೀಳು ಮಾನಸಿಕತೆಯನ್ನು ಬಿಂಬಿಸುತ್ತಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಬದಲು ಹತ್ಯೆಗೀಡಾದ ವೈದ್ಯರ ಮೇಲೆಯೇ ಪ್ರಶ್ನೆಚಿಹ್ನೆ ಕೂರಿಸುವುದು ಚಿಂತಾಜನಕ ಸಂಗತಿಯಾಗಿದೆ.
ಯಾವುದೇ ಒಬ್ಬ ಮಹಿಳೆ ಸಹಾಯವನ್ನು ಅಪೇಕ್ಷಿಸಿದಾಗ ಪ್ರತಿಯಾಗಿ ಸಹಾಯ ಮಾಡುವ ಬದಲಾಗಿ ಆ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಜೀವಂತವಿರುವಾಗಲೇ ಸುಟ್ಟು ಕೊಲೆ ಮಾಡುವ ಮಾನಸಿಕತೆವುಳ್ಳವರು ಭೂಮಿಮೇಲೆ ಬದುಕಿರುವುದು ಯೋಗ್ಯವಲ್ಲವೆಂದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ತಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ನಿಧಿ ತ್ರಿಪಾಠಿಯವರು ತಮ್ಮ ನೋವನ್ನು ವ್ಯಕ್ತಪಡಿಸಿ ಸರಕಾರವು ಕೋರ್ಟ ಮೂಲಕ ಅತ್ಯಾಚಾರಿಗಳಿಗೆ ಮರಣದಂಡನೆ ನೀಡಿ ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಂತಾಗಲು ಈ ನಿರ್ಣಯ ಸಮಾಜಕ್ಕೆ ಉದಾಹರಣೆಯಾಗಲಿ ಎಂದು ಆಗ್ರಹಿಸಿದ್ದಾರೆ