ಬಳ್ಳಾರಿ 22: ಅದಿರು ಸಾಗಿಸುತಿದ್ದ ಲಾರಿ ಪಲ್ಟಿಯಾಗಿ 10 ಗಣಿ ಕಾಮರ್ಿಕರು ಗಾಯಗೊಂಡಿರುವ ಘಟನೆ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ.
ಪಿ.ಬಿ.ಎಸ್ ಗಣಿಯಲ್ಲಿ ಶನಿವಾರ ಸಂಜೆ ಘಟನೆ ನಡೆದಿದ್ದು ಗಾಯಾಳುಗಳನ್ನು ಇಂಗಳಗಿ ಗ್ರಾಮದವರು ಎನ್ನಲಾಗಿದೆ.
ಕೆಲಸ ಮುಗಿಸಿದ್ದ ಕಾಮರ್ಿಕರಿಗೆ ಮನೆಗೆ ತೆರಳಲು ಯಾವುದೇ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ, ಅದಿರು ಸಾಗಿಸುತ್ತಿದ್ದ ಲಾರಿಯಲ್ಲೇ ಮನೆಯತ್ತ ಹೊರಟಿದ್ದರು. ಗಾಯಾಳುಗಳನ್ನು ಹೊಸಪೇಟೆ ಸಕರ್ಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಲಕ್ಷ್ಮಮ್ಮ ಮತ್ತು ಕುರಿ ಜಂಬುನಾಥ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ