ಬಳ್ಳಾರಿ; ವಿಕಲಚೇತನರ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆ

ಬಳ್ಳಾರಿ 26: ವಿಕಲಚೇತನರ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಅಂಗವಿಕಲರಿಗಾಗಿ ಶ್ರಮಿಸುತ್ತಿರುವ  ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು.

ವಿಕಲಚೇತನ ಮಕ್ಕಳು ಪಾರಿವಾಳ ಹಾರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಮಹಾಂತೇಶ್, ವಿಶ್ವಭಾರತಿ ಕಲಾನಿಕೇತನ ಆಡಳಿತಾಧಿಕಾರಿ ಗುರುಮೂರ್ತಿ, ಸಮುದಾಯ ಆರೋಗ್ಯ ಅಧಿಕಾರಿ ಗಾದಿಲಿಂಗನಗೌಡ, ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿದರು.

ಶ್ರವಣದೋಷವುಳ್ಳವರಿಗೆ ಚಿತ್ರಕಲಾ ಸ್ಪಧರ್ೆ, ದೈಹಿಕ ಅಂಗವಿಕಲರಿಗೆ ಮತ್ತು ದೃಷ್ಟಿ ದೋಷವುಳ್ಳವರಿಗೆ ಜಾನಪದ ಗೀತೆ ಹಾಗೂ ಭಾವಗೀತೆ, ಬುದ್ದಿಮಾಂದ್ಯ ಮಕ್ಕಳಿಗೆ ವೇಷಭೂಷಣ ಸ್ಪರ್ದೇ  ನಡೆಯಿತು.

ದೈಹಿಕ ಅಂಗವಿಕಲರಿಗೆ ಗುಂಡು ಎಸೆತ, ಜಾವಲಿನ್ ಥ್ರೋ, ಅಂಧರಿಗೆ ಕೇನ್ ರೇಸ್, ಗುಂಡು ಎಸೆತ, ಶ್ರವಣ ದೋಷವುಳ್ಳವರಿಗೆ 100 ಮೀಟರ್ ಓಟ, ಗುಂಡು ಎಸೆತ, ಬುದ್ದಿಮಾಂದ್ಯ ಮಕ್ಕಳಿಗೆ ಮ್ಯೂಸಿಕಲ್ ಚೇರ್ ಮತ್ತು ಚೆಂಡು ಎಸೆತದ ಸ್ಪರ್ದೇಗಳು ನಡೆದವು.

ಅಂಗವಿಕಲ ಮಕ್ಕಳು  ವೇಷಭೂಷಣ ಸ್ಪಧರ್ೆಯಲ್ಲಿ ಛದ್ಮವೇಶಗಳನ್ನು ತೊಟ್ಟು ಗಮನಸೆಳೆದರು. 

ಈ ಸಂದರ್ಭದಲ್ಲಿ ಸೈನಿಕರಾದ ಬಲಬೀರ್ ಸಿಂಗ್, ಸುಭಾಷ್ ಚಂದ್ರ, ದೈಹಿಕ ಶಿಕ್ಷಕರಾದ ಎಸ್.ಜಾನಕಿ, ದಯಾನಂದ ಸ್ವಾಮಿ, ಚಿತ್ರಕಲಾ ಶಿಕ್ಷಕ ಮಲ್ಲನಗೌಡ ಕಿತ್ತೂರು, ಸಂಗೀತ ಶಿಕ್ಷಕಿ ಕಲ್ಯಾಣಿ, ಶಿಕ್ಷಕ ಕೆ.ಕೆ.ಲಿಂಗಪ್ಪ ಸೇರಿದಂತೆ ಅನೇಕರು ಇದ್ದರು.