ಬೆಸ್ಟ್‌ ಟ್ಯಾಲೆಂಟ್‌: ಸ್ಕಾಲರ್ಶಿಪ್ ಪರೀಕ್ಷೆ

Best Talent: Scholarship Exam

ಬೆಸ್ಟ್‌ ಟ್ಯಾಲೆಂಟ್‌: ಸ್ಕಾಲರ್ಶಿಪ್ ಪರೀಕ್ಷೆ  

ತಾಳಿಕೋಟಿ 05: ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಬೆಸ್ಟ್‌ ಪಿ.ಯು ಸೈನ್ಸ್‌ ಕಾಲೇಜಿನಲ್ಲಿ ಏಪ್ರೀಲ್ 7ರಂದು 11.30 ರಿಂದ 12.30ರವರೆಗೆ ಬೆಸ್ಟ್‌ ಟ್ಯಾಲೆಂಟ್ ಏಕ್ಸಾಮ್ 2025ರ ಸ್ಕಾಲರ್ಶಿಪ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ವಿವೇಕಾನಂದ ಸಜ್ಜನ್ ಅವರು ತಿಳಿಸಿದರು.  

 ಬೆಸ್ಟ್‌ ಪಿ.ಯು ಸೈನ್ಸ್‌ ಕಾಲೇಜಿನ ಪ್ರಾಂಶುಪಾಲ ಬಿ.ಎಸ್‌.ಮಾಲಿಪಾಟೀಲ್ ರವರು ಮಾತನಾಡಿ ಈ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ಹಾಗೂ ತೃತಿಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು 4 ರಿಂದ 10ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.75 ಕಾಲೇಜು ಫೀ ಯಲ್ಲಿ ವಿನಾಯಿತಿ ನೀಡಲಾಗುವುದು. 11 ರಿಂದ 20 ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.50 ಕಾಲೇಜು ಫೀ ಯಲ್ಲಿ ವಿನಾಯಿತಿ ನೀಡಲಾಗುವುದು, ಹಾಗೂ 21 ರಿಂದ 30 ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶೇ.25 ಕಾಲೇಜು ಫೀ ಯಲ್ಲಿ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಘನಮಠೇಶ್ವರ ಆಂಗ್ಲಮಾದ್ಯಮ ಫ್ರೌಡಶಾಲೆಯ ಪ್ರಾಂಶುಪಾಲ ಬಸವರಾಜ ಸಜ್ಜನ್ ರವರು ಮಾತನಾಡಿ ಈ ಬಾರಿ ಎಸ್‌.ಎಸ್‌. ಎಲ್‌.ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಬೆಸ್ಟ್‌ ಟ್ಯಾಲೆಂಟ್ ಪರೀಕ್ಷೆಗೆ ಹಾಜರಾಗಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.