ಧರ್ಮನಗರಿಯಾಗಿರುವ ಶೇಡಬಾಳ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿಸಿರುವ ಭಗವಾನ್ ಮಹಾವೀರ

ಲೋಕದರ್ಶನ ವರದಿ

ಕಾಗವಾಡ 17: ಧರ್ಮನಗರಿಯಾಗಿರುವ ಶೇಡಬಾಳ ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿಸಿರುವ ಭಗವಾನ್ ಮಹಾವೀರ ದಿಗಂಬರ್ ಜೈನ್ ಮಂದಿರದಲ್ಲಿ ಮಾತೆ ಪದ್ಮಾವತಿ ದೇವಿಯ ಮೂತರ್ಿ ಪ್ರತಿಷ್ಠಾಪನೆ ನಿಮಿತ್ಯ ಪಲ್ಲಕ್ಕಿ ಮೆರವಣೆಗೆ ಶಾಂತಿಚಕ್ರ ವಿಧಾನ ಕಾರ್ಯಕ್ರಮ ಜರುಗಿತು.

ಬುಧವಾರ ಬೆಳಿಗ್ಗೆ ಮಂಗಲ ಕುಂಭ ಹಾಗೂ ಪಲ್ಲಕ್ಕಿ ಮೆರವಣೆಗೆ ಮಾತಾಜಿಗಳಾದ ಆಯರ್ಿಕಾ ನಿತಿಮತಿ ಮಾತಾಜಿ, ನವೀನಮತಿ ಮಾತಾಜಿ ಇವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಜೈನ್ ಮಂದಿರದಲ್ಲಿ ಪದ್ಮಾವತಿ ದೇವಿ ಮೂತರ್ಿ ಸ್ಥಾಪಿಸಲು ಅಥಣಿಯ ನೇತ್ರ ತಜ್ಞರಾದ ಡಾ. ಪದ್ಮಜೀತ ನಾಡಗೌಡಾ ಇವರು ದಾನವಾಗಿ ನೀಡಿದ್ದಾರೆ. 

ಶೇಡಬಾಳ ಧರ್ಮ ನಗರಿ ಎಂದು ಹೆಸರಾಂತವಾಗಿದೆ. ಈ ಗ್ರಾಮ ಸಮಾಧಿ ಸಮ್ರಾಟ ಆಚಾರ್ಯ ಶಾಂತಿಸಾಗರಜಿ ಮಹಾರಾಜರ ಕರ್ಮಭೂವಿ, ರಾಷ್ಟ್ರಸಂತ ವಿದ್ಯಾನಂದ ಮುನಿಮಹಾರಾಜರ ಮತ್ತು ಹಿರಿಯ ಕನ್ನಡ ಸಾಹಿತ್ತಿ ಮಿಜರ್ಿ ಅಣ್ಣಾರಾಯರ ಜನ್ಮಭೂಮಿ, ಸಮಾಧಿ ಸಮ್ರಾಟ ಆಚಾರ್ಯ ಸುಭಲಸಾಗರ ಮಹಾರಾಜರ ಕರ್ಮಭೂಮಿವಾಗಿದೆ. 

ಗ್ರಾಮದ ಜೈನ್ ಬಾಂಧವರು ಒಂದುಗುಡಿ ಭಕ್ತಿಪೂರ್ವಕ ಪದ್ಮಾವತಿ ದೇವಿಯ ಮೂತರ್ಿಗೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ಶಾಂತಿಚಕ್ರ ವಿಧಾನ, ಆರಾಧನೆ ಕಾರ್ಯಕ್ರಮ ಮಂದಿರದಲ್ಲಿ ನೆರವೇರಿಸಿದರು. ಪೂಜಾ ವಿಧಾನದ ಮುಖ್ಯಸ್ಥರಾಗಿ ಗ್ರಾಮದ ಗೌಡರಾದ ಅಮೀತ ಅತಿಕ್ರಾಂತ ಪಾಟೀಲ ದಂಪತಿಗಳಿಂದ ನೆರವೇರಿತು. 

ಭಗವಾನ್ ಮಹಾವೀರ ಜೈನ್ ಮಂದಿರದ ಮುಖ್ಯಸ್ಥರು ಪೊಲೀಸ್ ಪಾಟೀಲರಾದ ಅತಿಕ್ರಾಂತ ಪಾಟೀಲ, ಮಾಮಾಸಾಹೇಬ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಸುನೀಲ್ ಪಾಟೀಲ, ಶ್ರಾವಕರಾದ ಜಿನ್ನಪ್ಪಾ ನಾಂದಣಿ, ಪಿ.ಡಿ.ನ್ಯಾಮಗೌಡರ, ನೇಮಗೌಡಾ ಘೇನಾಪಗೋಳ, ಮಹಾವೀರ ಸಾಬನ್ನವರ, ತಾತ್ಯಾಸಾಬ ಮೂಲಿಮನಿ ಸೇರಿದಂತೆ ಅನೇಕರು ಶ್ರಾವಕ-ಶ್ರಾವಿಕೆಯರು ಪಾಲ್ಗೊಂಡಿದ್ದರು.

ಪ್ರತಿಷ್ಠಾಚಾರ್ಯರಾಗಿ ಸನ್ಮತಿ ಉಪಾಧ್ಯೆ, ಬಾಹುಬಲಿ ಉಪಾಧ್ಯೆ ಪೂಜೆ ವಿಧಾನ ಕೈಗೊಂಡರು. ಧನಪಾಲ್ ಆಸಂಗಿ ಸಂಗೀತ ನೀಡಿದರು. ಶೀತಲ ಮಾಲಗಾಂವೆ ನಿರೂಪಿಸಿದರು. ಗುರುವಾರ ದಿ. 18 ರಂದು ಬೆಳಿಗ್ಗೆ 10 ಗಂಟೆಗೆ ಮಂದಿರದಲ್ಲಿ ಮೂತರ್ಿ ಪ್ರತಿಷ್ಠಾಪನೆಗೊಳ್ಳಲಿದೆ. ಇದರ ನಿಮಿತ್ಯ ನವಗ್ರಹ ಹೋಮ, ಜಲ ಹೋಮ, ಸಂಜೆ ಉತ್ಸವ ಶಸ್ತ್ರ ಪೂಜೆ, ಬನ್ನಿ ಮೂಡಿಯುವ ಕಾರ್ಯಕ್ರಮ ನೆರವೇರಲಿದೆ. 

ಫೋಟೊ ಶಿಷರ್ಿಕೆ: 17 ಕಾಗವಾಡ 1 ಶೇಡಬಾಳ ಗ್ರಾಮದ ಭಗವಾನ್ ಮಹಾವೀರ ಜೈನ್ ಮಂದಿರದಲ್ಲಿ ಮಾತೆ ಪದ್ಮಾವತಿ ದೇವಿ ಮೂತರ್ಿ ಪ್ರತಿಷ್ಠಾಪನೆ ನಿಮಿತ್ಯ ಶಾಂತಿಚಕ್ರ ವಿಧಾನ ಕಾರ್ಯಕ್ರಮದ ದೃಶ್ಯ.