ಭೀಮಾ ಕೋರೆಗಾಂವ ದಲಿತ ವೀರ ಯೋಧರ ನಮನ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ, 1 : ಸಂವಿಧಾನ ಪ್ರತಿಗಳಿಗೆ ಬೆಂಕಿ ಇಟ್ಟು ಸುಡುತ್ತಿರುವ ಈ ಸಂದರ್ಭದಲ್ಲಿ.  ಡಾ. ಬಾಬಾಸಾಹೇಬ ಅಂಬೇಡ್ಕರರ ಪ್ರತಿಮೆಗಳಿಗೆ ಭಗವಾ ಬಣ್ಣ ಬಳಿಯುವ ಕುಹಕಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಶೋಷಿತ ಸಮುದಾಯಗಳು ಮೀಸಲಾತಿ ಸಮಸ್ಯೆಯನ್ನು ನಾಲ್ಕು ಕೋಣೆಗಳ ನಡುವೆ ಬಗೆಹರಿಸಿಕೊಂಡು ಐಕ್ಯತೆ ಮತ್ತು ಸ್ವಾಭಿಮಾನವನ್ನು ಪ್ರದಶರ್ಿಸಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.

ನಗರದ ಡಾ. ಬಾಬಾಸಾಹೇಭ ಅಂಬೇಡ್ಕರರ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಮತ್ತು ಅಕ್ಷರ ತಾಯಿ ಪ್ರಶಸ್ತಿಗಳ ಪ್ರದಾನ ಸಮಾರಂಭದ ಸಾಹಿತ್ಯ ಬಿಡುಗಡೆ ಹಾಗೂ ಭೀಮಾ ಕೋರೆಗಾಂವ ದಲಿತ ವೀರ ಯೋಧರ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವ ಕಾರ್ಯಕರ್ತರ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವ ಸಂಸ್ಕೃತಿಯನ್ನು ಅಳಿಸಿಹಾಕಬೇಕೆನ್ನುವ ವಿಫಲ ಹುನ್ನಾರ ನಡೆದಿದೆ. ಶೋಷಿತ ಸಮುದಾಯಗಳ ಸ್ವಾಭಿಮಾನಕ್ಕೆ ಉದ್ದೇಶ ಪೂರ್ವಕವಾಗಿ ಧಕ್ಕೆ ತರಲಾಗುತ್ತಿದೆ.  ಲೋಕ ಸಭೆಯ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜಾತ್ಯಾತೀತ ಶಕ್ತಿಗಳನ್ನು ಒಗ್ಗೂಡಿಸಬೇಕಾಗಿದೆ. ದೇಶದ ಸಂವಿಧಾನವನ್ನೆ ಬದಲಿಸುತ್ತೇವೆ ಎಂಬ ಮನು ಮನಸ್ಸುಗಳನ್ನು ಅಧಿಕಾರದಿಂದ ದೂರ ಇಡಬೇಕಾದ ಅಗತ್ಯ ಇದೆ ಎಂದು ಅವರು ಅಭಿಪ್ರಾಯ ಪಟ್ಟರು.

ಕಲ್ಪಿತ ದೇವ ದೇವತೆಗಳನ್ನು ಪಕ್ಕಕ್ಕೆ ತಳ್ಳಿ ಆ ಜಾಗದಲ್ಲಿ ಬಸವ ಅಂಬೇಡ್ಕರ ಸಾವಿತ್ರಿಬಾಯಿ ಫುಲೆ ಅವರಂತಹ ಸಮಾಜ ದೇವರುಗಳನ್ನು ಪ್ರತಿಷ್ಠಾಪಿಸುವ ಮೂಲಕ ನೆಲಮೂಲ ಸಂಸ್ಕೃತಿಯನ್ನು ಬಲಪಡಿಸಬೇಕಾಗಿದೆ. ದೇಶಕ್ಕೆ ಹೊಸ ಆಯಾಮ ನೀಡಬೇಕಾಗಿದೆ ಎಂದರು.

ಸುಮಾರು 40 ಜನ ಕಾರ್ಯಕರ್ತರನ್ನು ಬೀಳ್ಕೊಡಲಾಯಿತು. ಸುಧಾಕರ ಡೊಂಕಣ್ಣವರ, ಮಹಾಂತೇಶ ತಿಪ್ಪಾಯಿ, ಲಕ್ಷ್ಮಿ ಅಲಬಣ್ಣವರ, ಭಾರತಿ ತಿಪ್ಪಾಯಿ, ಭಾವನಾ ರಾಗಿ ಪಾಟೀಲ, ಸಿದ್ದವ್ವ ಮೋದಗಿಕರ, ಸುಜಾತಾ ಕಲ್ಲನ್ನವರ, ಅನುಶಾ ದಾಂಡೇಕರ, ತುಲಸಾ ಖನಗಾಂವಕರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.