ಗ್ರಂಥಪಾಲಕ ಪ್ರೊ ಕೆ.ಎಸ್‌.ದೇಶಪಾಂಡೆ ಅವರ ಜನ್ಮಶತಮಾನೋತ್ಸವ

Birth centenary of Librarian Prof. K.S. Deshpande

ಹುಬ್ಬಳ್ಳಿ 09: ನಾಡಿನ ಖ್ಯಾತ ಗ್ರಂಥಪಾಲಕ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಪಾಲಕರಾಗಿ ಗ್ರಂಥಾಲಯದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ್ದ ಪ್ರೊ ಕೆ.ಎಸ್‌.ದೇಶಪಾಂಡೆ ಅವರ ಜನ್ಮಶತಮಾನೋತ್ಸವ ನಿಮಿತ್ ಪ್ರೊ ಕೆ.ಎಸ್‌.  ದೇಶಪಾಂಡೆ ಅವರ ಭಾವಚಿತ್ರಕ್ಕೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ವತಿಯಿಂದ ಪುಷ​‍್ಾರೆ್ಪಣ ಮಾಡುವ ಮೂಲಕ ಗೌರವ ಅರೆ​‍್ಣ ಮಾಡಿ, ನಮನಗಳನ್ನು ಸಲ್ಲಿಸಲಾಯಿತು.  

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಸಮೀರ್ ದೇಶಪಾಂಡೆ, ಪ್ರೊ ಸತೀಶ ಕುಲಕರ್ಣಿ, ಓಜಸ್ ಕಲ್ಪತರು, ಪ್ರತಿಭಾ ಕುಲಕರ್ಣಿ, ಡಾ. ಎಸ್‌.ಕೆ.ಸವಣೂರ, ಡಾ. ವಿನಾಯಕ ಬಂಕಾಪುರ, ಡಾ. ಸಂಜೀವ ಕುಲಕರ್ಣಿ, ಇಂದುಧರ ಹಿರೇಮಠ, ಮುಂತಾದವರು ಇದ್ದರು.  

ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರ ಕಾರ್ಯಚಟುವಟಿಕೆಗಳನ್ನು ಪತ್ರಿಕೆಗಳ ಮೂಲಕ ಗಮನಿಸಿದ ಪ್ರೊ ಕೆ.ಎಸ್‌.  ದೇಶಪಾಂಡೆ ಅವರು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರಿಗೆ ಸ್ವತಃ ಪತ್ರ ಬರೆದು ಶ್ಲಾಘಿಸಿದ್ದರು ಎಂಬುದನ್ನು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ನೆನಪಿಸಿದ್ದಾರೆ. ಪ್ರೊ ದೇಶಪಾಂಡೆ ಸರ್ ಅವರನ್ನು ವಿವಿಧ ಸಮಾರಂಭಗಳಲ್ಲಿ ಹಾಗೂ ಅವರ ಮನೆಯಲ್ಲಿ ಭೇಟಿಯಾಗಿದ್ದನ್ನು ಸ್ಮರಿಸಿದ್ದಾರೆ.