ವಾಟಾಳ್ ನಾಗರಾಜ ಅವರ ಹುಟ್ಟುಹಬ್ಬ ಆಚರಣೆ

ಲೋಕದರ್ಶನ ವರದಿ

ಗದಗ 07: ಕನ್ನಡಪರ ಚಳವಳಿ ವಾಟಾಳ್ ಸಂಘಟನೆಯ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ ಅವರ 79 ನೇಯ ಹುಟ್ಟುಹಬ್ಬದ ಅಂಗವಾಗಿ  ಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಜಿಲ್ಲಾ ಕನ್ನಡ ಪರ ಚಳವಳಿ ವಾಟಾಳ್ ಸಂಘಟನೆಯ ವತಿಯಿಂದ ಹಾಲು ಮತ್ತು ಬ್ರೆಡ್ ಹಂಚುವ ಮೂಲಕ  ವಾಟಾಳ್ ನಾಗರಾಜ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. 

ಜಿಲ್ಲಾಧ್ಯಕ್ಷ ರಾಜು ಪೂಜಾರ, ಉಪಾಧ್ಯಕ್ಷ ವೆಂಕಟೇಶ ಶಾಂತಗೇರಿ, ವಾಸು ಮೆಟಕಲ್, ರಾಜೇಸಾಬ ದೊಡಮನಿ ಮಣಿಕಂಠ ಭಂಡಾರಿ, ಈಶ್ವರ ಕಡೂರ, ಕಿರಣ ಬೆಟಗೇರಿ, ಪಿಂಟು ಶಿರಗುಂಪಿ, ದುರಗಪ್ಪ ಸಂಕನಕಲ್, ರವಿತೇಜ ಭಂಡಾರಿ, ವಿಷ್ಣು ಗುಂಜಿ, ಬಸವರಾಜ ಬೆಟಗೇರಿ, ಮಂಜುನಾಥ ಪೂಜಾರ, ಹನಮಂತ ಬಳ್ಳಾರಿ, ನಾಗರಾಜ ಹರಕೇರಿ, ವಿರೇಶ, ಆಂಜನೇಯ ಕಟಗಿ, ಹನಮಂತಪ್ಪ ಡೋಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.