ಕೊರೊನಾ ಭೀತಿ: ವಿದೇಶ ಪ್ರವಾಸ ರದ್ದುಪಡಿಸಿದ ಚಿತ್ರತಂಡ

ಬೆಂಗಳೂರು, ಮಾ.3, ಕೊರೊನಾ ಭೀತಿ ಸ್ಯಾಂಡಲ್ ವುಡ್ ಚಿತ್ರಕ್ಕೂ ತಟ್ಟಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಯುವರತ್ನ ಚಿತ್ರದ ಚಿತ್ರೀಕರಣ ವಿದೇಶದಲ್ಲಿ ನಡೆಯಬೇಕಿತ್ತು.ಇದೇ ತಿಂಗಳು 3ರಿಂದ 7ರವರೆಗೆ ವಿದೇಶದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಮಾಡಿಕೊಂಡಿತ್ತು. ಅಲ್ಲದೇ, ಮುಂಗಡವಾಗಿ ಸ್ಲೋವೆನಿಯಾದಲ್ಲಿ ಹೋಟೆಲ್ ಕೂಡ ಬುಕ್ ಮಾಡಿಕೊಂಡಿತ್ತು. ಆದರೀಗ, ಕೊರೊನಾ ಭೀತಿಯಿಂದ ಚಿತ್ರತಂಡ ಚಿತ್ರೀಕರಣಕ್ಕೆ ತೆರಳಲು ಹಿಂದೇಟು ಹಾಕಿದೆ ಎನ್ನಲಾಗಿದೆ.ಸಂತೋಷ್ ಆನಂದ್ರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಟಾಲಿವುಡ್ ಮೂಲಕ ಬಣ್ಣದಲೋಕ ಪ್ರವೇಶಿಸಿದ್ದ ಸಯೇಷಾ ಸೈಗಲ್ ಪುನೀತ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.ಚಿತ್ರಕ್ಕೆ ವಿಜಯ್ ಕಿರಗಂದೂರ್ ಬಂಡವಾಳ ಹೂಡಿದ್ದು, ಎಸ್. ತಮನ್ ಸಂಗೀತ ಸಂಯೋಜಿಸಿದ್ದಾರೆ.ಇನ್ನು ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣವಿದೆ.