ತಾಂಬಾ 12: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಹಿರಿಯ ನ್ಯಾಯವಾದಿ ಹೆಚ್. ಕಾಂತಾರಾಜು ನೇತೃತ್ವದ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡನೆ ಮಾಡಿ, ಅನುಷ್ಠಾನಕ್ಕೆ ನಿರ್ಧಾರ ಮಾಡಿರುವ ಕ್ರಮವನ್ನು ಜಿಲ್ಲಾ ಅಹಿಂದ ಮುಖಂಡರಾದ ಸತೀಶಕುಮಾರ ಅಡವಿ ಸ್ವಾಗತಿಸಿದ್ದಾರೆ.
ಬದ್ದತೆಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ ಕಳೆದ 2015ರಲ್ಲಿ ರಾಜ್ಯದ ಎಲ್ಲ ಜಾತಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಓದ್ಯೋಗಿಕ, ಕೌಟುಂಬಿಕ, ರಾಜಕೀಯ ಹೀಗೆ ಸುಮಾರು 55 ಅಂಶಗಳನ್ನು ಒಳಗೊಂಡ ಪ್ರಶ್ನಾವಳಿಯನ್ನು ರಚಿಸಿ 1.35 ಲಕ್ಷ ಗಣತಿದಾರರು, 1.27 ಕೋಟಿ ಮನೆಗಳಿಗೆ ಭೇಟಿ ಮಾಡಿ ಸಮೀಕ್ಷೆ ಮಾಡಲಾಗಿದೆ. ಸುಮಾರು 162 ಕೋಟಿ ರೂ. ಖರ್ಚು ಮಾಡಿ ಅತ್ಯಂತ ವೈಜ್ಞಾನಿಕವಾಗಿ ಸಿದ್ದಪಡಿಸಿರುವ ವರದಿ ಸ್ವೀಕರಿಸಿ ಹತ್ತಾರು ವರ್ಷಗಳೇ ಕಳೆದಿವೆ. ಈಗ ಬರುವ ಸಚಿವ ಸಂಪುಟದಲ್ಲಿ ಅನುಷ್ಠಾನಕ್ಕೆ ತರಲೇಬೇಕು ಎಂದು ಆಗ್ರಹಿಸಿದ್ದಾರೆ. ಈ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ ಸೇರಿ ಸಂಪುಟದ ಎಲ್ಲ ಸಚಿವರಿಗೆ ರಾಜ್ಯದ ಶೋಷಿತ ಸಮುದಾಯಗಳು ಕೃತಜ್ಞತೆ ಸಲ್ಲಿಸಿವೆ ಎಂದಿದ್ದಾರೆ.