ಕ್ಯಾಲಿಫೋರ್ನಿಯಾ: ವಿಮಾನ ಅಪಘಾತದಲ್ಲಿ 4 ಮಂದಿ ದುರ್ಮರಣ

ಲಾಸ್ ಏಂಜಲೀಸ್, ಜ 23, ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಡೌನ್ಟೌನ್ ನಿಂದ ಪೂರ್ವಕ್ಕೆ 75 ಕಿಲೋಮೀಟರ್ ದೂರದಲ್ಲಿರುವ ಕರೋನಾ ಮುನ್ಸಿಪಲ್ ವಿಮಾನ ನಿಲ್ದಾಣದಲ್ಲಿ ಲಘು ವಿಮಾನ ಅಪಘಾತಕ್ಕೀಡಾಗಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.ಕರೋನಾ ಪೊಲೀಸ್ ಇಲಾಖೆಯ ಪ್ರಕಾರ, ಸ್ಥಳೀಯ ಸಮಯ ಬುಧವಾರ 1211 ಗಂಟೆಗೆ ಅಪಘಾತ ಸಂಭವಿಸಿದೆ.ವಿಮಾನದಲ್ಲಿದ್ದ ನಾಲ್ವರೊಂದಿಗೆ ವಿಮಾನವು ಆಫ್ ಆದ ನಂತರ ನೆಲಕ್ಕೆ ಅಪ್ಪಳಿಸಿತು ಮತ್ತು ವಿಮಾನ ನಿಲ್ದಾಣದ ರನ್ ವೇ ಕೊನೆಯಲ್ಲಿ ಬೆಂಕಿ ಹೊತ್ತುಕೊಂಡು ಸುಟ್ಟುಹೋಯಿತು ಎನ್ನಲಾಗಿದೆ.   

 ಮಾರಣಾಂತಿಕ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ.  ಹಾಗೂ ಮೃತರ ಕುರಿತು ಇದುವರೆಗೂ  ಯಾವುದೇ ಮಾಹಿತಿ ಇಲ್ಲ ಎಂದು ಕರೋನಾ ಅಗ್ನಿಶಾಮಕ ಸಿಬ್ಬಂದಿ ಜಾನ್ ಡಿಯೋ ಸುದ್ದಿಗಾರರಿಗೆ ತಿಳಿಸಿದ್ದಾರೆ.ಅಪಘಾತದ ಕಾರಣ ತನಿಖೆ ಹಂತದಲ್ಲಿದೆ.  ವಿಮಾನವು ಟೇಕಾಫ್ ಆಗುತ್ತಿದ್ದಂತೆ ಮತ್ತು ಅದು ಅಲ್ಲಿ ಬೇಲಿಗೆ ಡಿಕ್ಕಿಯಾಗಿದೆ. ಫ್ಲಿಪ್ ಆಗಿ ಮತ್ತೆ ಭೂಮಿಗೆ ಬಡಿದಿದೆ.   ವಿಮಾನವು ನೆಲದಿಂದ ಸುಮಾರು 3 ಅಡಿ (0.91 ಮೀಟರ್) ಗಿಂತ ಹೆಚ್ಚು ಕೆಳಗೆ ಬಿದ್ದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಪೈಲಟ್‍ ಲಘು ವಿಮಾನವನ್ನು ಹೆಚ್ಚು ವೇಗವಾಗಿ ಚಲಾಯಿಸುತ್ತಿದ್ದರು. ವಿಮಾನ ಪಲ್ಟಿಯಾದ ನಂತರ ಬೆಂಕಿ ಕಾಣಿಸಿಕೊಂಡು ಎರಡು ಬಾರಿ ಸ್ಫೋಟಿಸಿತು.  ಬೆಂಕಿ ಬಳಿಕ ನಂದಿಸಲು ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಲಾಯಿತು. ಅಪಘಾತದ ಬಗ್ಗೆ ಸಂಸ್ಥೆ ತನಿಖೆ ನಡೆಸಲಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವಕ್ತಾರ ಇಯಾನ್ ಗ್ರೆಗರ್ ಹೇಳಿದ್ದಾರೆ.