ಲೋಕದರ್ಶನ ವರದಿ
ವಿಜಯಪುರ 05: ಜಿಲ್ಲಾ ಅಸಂಘಟಿತ ಕೂಲಿ ಕಾಮರ್ಿಕರು, ಬಡತನ ರೇಖೆಗಿಂತ ಕೆಳಗಿರುವ ಕಾಮರ್ಿಕರು ಆಥರ್ಿಕವಾಗಿ ಸಬಲರಾಗಲು ಕೇಂದ್ರ ಸಕರ್ಾರದ ಪ್ರಧಾನಮಂತ್ರಿ ಶ್ರಮಯೊಗಿ ಮನ-ಧನ ಯೋಜನೆ ಸಹಕಾರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಕಾಮರ್ಿಕ ಸಮುದಾಯ ಭವನದಲ್ಲಿಂದು ಅಸಂಘಟಿತ ಕಾಮರ್ಿಕರ ಪಿಂಚಣಿ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬಡತನವನ್ನು ಹೋಗಲಾಡಿಸಲು ಇಂತಹ ಅತ್ಯುತ್ತಮ ಯೋಜನೆಗಳ ಅವಶ್ಯಕತೆ ಇದ್ದು, ನ್ಯಾಯಯುತವಾಗಿ ಬಡವರಿಗೆ ಸೇರಬೇಕಾದ ಸವಲತ್ತುಗಳು ಅನುದಾನಗಳು ಅಸಂಘಟಿತ ಕೂಲಿಕಾಮರ್ಿಕರಿಗೆ ತಲುಪಲು ಸಹಕಾರಿಯಾಗಿವೆ, ಪ್ರಧಾನ ಮಂತ್ರಿ ಜನಧನ್ ಯೋಜನೆ, ಜನ ಔಷಧಿ ಯೋಜನೆ , ಪ್ರಧಾನ ಮಂತ್ರಿ ಕೌಶಲ್ಯ ಅಭವೃದ್ದಿ ಯೋಜನೆ ಇನ್ನೂ ಮೂಂತಾದ ಯೋಜನೆಗಳು ಬಡವರ ಹಿತರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದುಬ ಹೇಳಿದರು.
ಮಾನ್ಯ ಪ್ರಧಾನ ಮಂತ್ರಿಗಳ ಯೋಜನೆಗಳು ಬಡವರ ಪರವಾಗಿದ್ದು ಕೂಲಿಕಾಮರ್ಿಕರು ವಿಕಲಚೇತನರು, ವಿಧವೆಯರು, ಮುಂತಾದ ಅಸಂಘಟಿತರು ಎಲ್ಲರಂತೆ ಉತ್ತಮ ಜೀವನ ನಡೆಸಲು ಸವರ್ೊತೋಮುಖ ಅಭಿವೃದ್ದಿಗೆ ಸಹಕಾರಿಯಾಗಿವೆ ಈ ನಿಟ್ಟಿನಲ್ಲಿ ಬಡವರು ಅಧಿಕಾರಿಗಳ ಬಳಿ ಸಹಕಾರಕ್ಕಾಗಿ ಬಂದರೆ ತಾತ್ಸಾರ ಮನೋಭಾವದಿಂದ ನೋಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಂಚಣಿ ನೊಂದಣಿ ಕಾಡರ್್ಗಳನ್ನು ವಿತರಿಸಲಾಯಿತು. ಜಗದೇವಿ, ಪ್ರಭುಗೌಡ ಪಾಟೀಲ, ಅಶೋಕ ಬಾಳಿಕಟ್ಟಿ, ಅರುಣಕುಮಾರ, ಶ್ರೀಧರ, ಅಜೇಜಾ ಕುಮಾರ, ವಿಜಯಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.