ಸಿಂದಗಿ 28: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಇದೇ 30 ರಂದು ನಡೆಯಲಿರುವ ಸಾಂಸ್ಕೃತಿಕಾ ನಾಯಕ ಜಗಜ್ಯೋತಿ ಬಸವೇಶ್ವರರ 892ನೇ ಜಯಂತಿಯನ್ನು ಅದ್ದೂರಿ, ಅಭಿಮಾನದಿಂದ ಅರ್ಥಪೂರ್ಣವಾಗಿ ಆಚರಿಸೋಣ ಕಾರಣ ಸಿಂದಗಿ ಮಹಾಜನತೆ ಹಾಗೂ ಬಸವ ಭಕ್ತರು ಹೆಚ್ಚಿನ ಸಂಖ್ಯೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸು ಮಾಡಬೇಕು ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.
ಪಟ್ಟಣದ ಬಸವ ಮಂಟಪದಲ್ಲಿ 12ನೇ ಶತಮಾನದ ಮಹಾನಾಯಕ ಬಸವೇಶ್ವರರ ಜಯಂತಿ ನಿಮಿತ್ಯ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಡಾ ಪ್ರಭು ಸಾರಂಗದೇವ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ ಬಸವ ರಥಯಾತ್ರೆಯು ಸಕಲ ವಾಧ್ಯ ಮೇಳಗಳೊಂದಿಗೆ ಡಿಜೆ ಧ್ವನಿ ವರ್ಧಕದ ಮೂಲಕ ಶರಣರ ವಚನಗಳ ಪ್ರಸಾರದೊಂದಿಗೆ ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ತೆರಳಿ ಟಿಪ್ಪು ಸುಲ್ತಾನ ವೃತ್ತ, ಡಾ ಅಂಬೇಡ್ಕರ ವೃತ್ತ, ಅಂಬಿಗರ ಚೌಡಯ್ಯ ವೃತ್ತದಿಂದ ಬಸವ ಮಂಟಪಕ್ಕೆ ತಲುಪುವುದು ರಸ್ತೆಯ ಮಾರ್ಗ ಮಧ್ಯ ತಂಪು ಪಾನೀಯ, ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಅಲ್ಲದೆ ಮದ್ಯಾಹ್ನ 4 ಗಂಟೆಗೆ ಬಸವೇಶ್ವರರ ಕುರಿತು ಉಪನ್ಯಾಸ ಕಾರ್ಯಕ್ರಮ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗುವುದು ಕಾರಣ ಪಟ್ಟಣದ ಮಹಾಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಿವಾನಂದ ಕಲಬುರ್ಗಿ ಮಾತನಾಡಿ, ಏ 15ರಿಂದ 30 ರವರೆಗೆ ಕಲಬುರ್ಗಿ ಸಾರಂಗದರ ಮಠದ ಬಸವ ತಾಯಿಯವರಿಂದ ಬಸವ ತತ್ವ ಪ್ರವಚನ ನಡೆಯುತ್ತಿದ್ದು 30 ರಂದು ಮುಕ್ತಾಯ ಸಮಾರಂಭ ಹಾಗೂ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಈ ಕಾರ್ಯಕ್ರಮದ ನೇತೃತ್ವವನ್ನು ಶಾಸಕ ಅಶೋಕ ಮನಗೂಳಿ ವಹಿಸಲಿದ್ದು, ಡಾ ಪ್ರಭುಸಾರಂಗದೇವ
ಶಿವಾಚಾರ್ಯರ ಸಾನಿಧ್ಯದಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಪುರಸಭೆ ಅದ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಸೇರಿದಂತೆ ಅನೇಕರು ಅಥಿತಿಗಳಾಗಿ ಬಾಗವಹಿಸಲಿದ್ದು ಸಿ.ಎಂ.ಮನಗೂಳಿ ಕಾಲೇಜಿ ನಿವೃತ್ತ ಪ್ರಾಧ್ಯಾಪಕ ಬಿ.ಎನ್.ಪಾಟೀಲರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮುತ್ತು ಮುಂಡೇವಾಡಗಿ, ವಿಶ್ವನಾಥ ಜೋಗುರ, ರವಿ ದೇಸಾಯಿ, ಅಂಬರೀಶ ಚೌಗಲೆ, ಶಿವಾನಂದ ಹಡಪದ, ಸತೀಶಗೌಡ ಬಿರಾದಾರ, ಸಾಯಬಣ್ಣ ಪುರದಾಳ, ಗುರು ತಾರಾಪುರ, ಶೈಲಜಾ ಸ್ಥಾವರಮಠ ಸೇರಿದಂತೆ ಅನೇಕರಿದ್ದರು.