ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಕರೆ

ಬೆಳಗಾವಿ, 1: ದಿನ ನಿತ್ಯ ಜೀವನದಲ್ಲಿ ಅತಿಯಾಗಿ ಪ್ಲಾಸ್ಟಿಕ್ ಬಳಸಿ ಬಿಸಾಡುತ್ತಿರುವುದರಿಂದ ಅವುಗಳನ್ನು ತಿನ್ನುವ ಜಾನುವಾರಗಳು, ಜಲಚರಗಳು ನಿರಂತರವಾಗಿ ಸಾವನ್ನಪ್ಪುತ್ತಿವೆ. ನಾವೆಲ್ಲ ಪ್ಲಾಸ್ಟಿಕ್ ಮಾಲಿನ್ಯ ತಡೆಯಲು ಶ್ರಮಿಸೋಣ ಎಂದು ಪರಿಸರ ಮಿತ್ರ ಸಂಘದ ಅಧ್ಯಕ್ಷರಾದ ಪ್ರೊ|| ಜಿ. ಕೆ. ಖಡಬಡಿ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಡಾ// ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರಕ್ಕೆ ತಮ್ಮ ಜನ್ಮ ದಿನದ ಅಂಗವಾಗಿ ಸಸಿ ವಿತರಿಸಿ ಮಾತನಾಡಿದರು. 

ಮುಂದುವರೆದು ಮಾತನಾಡಿದ ಅವರು ನಮಗಿರುವುದು ಇದು ಒಂದೇ ಭೂಮಿ ಈ ಭೂಮಿಯ ಮೇಲಿನ ಪರಿಸರ ಉಳಿಸಿ, ಬೆಳೆಸಿ ಆ ಮೂಲಕ ಮನುಕುಲ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ಸಮಾರಂಭದಲ್ಲಿ ಕರಾಮಾನಿ ಮಂಡಳಿಯ ಅಧಿಕಾರಿಗಳಾದ ಡಾ|| ಜಿ. ಎಂ. ಪಾಟೀಲ, ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು.