ಬೆಳಗಾವಿ 21: ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿಯ ಜಿಲ್ಲಾ ಮಟ್ಟದ ಸಲಹಾ ಸಮಿತಿಯ (ಆಐಖಂಅ) ಸಭೆಯನ್ನು ಇತ್ತೀನ ದಿನ ಬೆಳಗಾವಿಯ ಜಿಲ್ಲಾ ಪಂಚಾಯತಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದಂತಹ ರಾಹುಲ ಶಿಂದೆ, ಋಖ ಕೆನರಾ ಬ್ಯಾಂಕ ಲಿಡ್ ಡಿಸ್ಟ್ರೀಕ್ಟ್ ಮ್ಯಾನೇಜರಾದ ಪ್ರಶಾಂತ ಗೋಡಕೆ, ನರ್ಬಾಡನ ಡಿ. ಡಿ ಎಮ್. ಆದ ಅಭಿನವ ಯಾದವ್, ಬೆಳಗಾವಿ ಜಿಲ್ಲಾ ಪಂಚಾಯತಿಯ ಯೋಜನಾ ನಿದೇರ್ಶಕರಾದ ಆರ್. ಎನ್. ಬಂಗಾರೆಪ್ಪನವರ ಮತ್ತು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ ಗೊಕಾಕ ಮತ್ತು ಬೆಳಗಾವಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಸಂತೋಷ ನರಗುಂದ ಮತ್ತು ನಿತ್ಯಾನಂದ ಕೋಲ್ಲೋಳ್ಳಿ ಹಾಗೂ ಸಂಸ್ಥೆಯ ನಿದೇರ್ಶಕರಾದ ಪ್ರವೀಣ ಕೆ. ಎಸ್. ಇವರುಗಳ ಸಹಭಾಗಿತ್ವದಲ್ಲಿ ಸಭೆಯು ಜರುಗಿತು.
ಸಭೆಯಲ್ಲಿ ಸಂಸ್ಥೆಯ ಪ್ರಗತಿ ಪರೀಶೀಲನೆಯನ್ನು ಮಾಡಲಾಯಿತು. ಎಪ್ರೀಲ್ ನಿಂದ ಡಿಸೆಂಬರ್ ವರೆಗೆ ಮಹಿಳಾ ವಸ್ತ್ರ ವಿನ್ಯಾಸ, ಬ್ಯೂಟಿ ಪಾರ್ಲರ, ಆಡು ಸಾಕಾಣಿಕೆ, ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ, ಮೊಬೈಲ ರೀಪೆರಿ, ಲಘು ಮೋಟಾರ ವಾಹನ ಚಾಲನೆ ಮುಂತಾದ ತರಬೇತಿಗಳನ್ನು 763 ಜನ ಸದಸ್ಯರಿಗೆ ತರಬೇತಿಯನ್ನು ನಿಡಿದ್ದು, ಅದರಲ್ಲಿ ಸರಿಸುಮಾರು 618 ಜನ ಸದಸ್ಯರು ಸ್ವ ಉದ್ಯೋಗವನ್ನು ಮಾಡುತ್ತಿದ್ದಾರೆ. 367 ಜನ ಸದಸ್ಯರು ಬ್ಯಾಂಕಿನಿಂದ ಸಾಲ ಪಡೆದಿರುತ್ತಾರೆ. ಸಂಸ್ಥೆಯ ಪ್ರಗತಿ ಪರೀಶೀಲನೆ ಮಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರಾಹುಲ್ ಶಿಂಧೆ ಋಖ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಗ್ರಾಮೀಣ ಜನರಿಗೆ ಒದಗಿಸುವ ಪ್ರಯತ್ನ ಮಾಡಿ ಹೊಸ ಪ್ರಚಲಿತ ಅವಶ್ಯವಿರುವ ತರಬೇತಿಗಳನ್ನು ಹಮ್ಮಿಕೊಳ್ಳಿ ಎಂದು ತಿಳಿಸಿದರು.
ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರವೀಣ ಕೆ. ಎಸ್. ಇವರು ಜಿಲ್ಲೆಯ ಲಿಡ್ ಡಿಸ್ಟ್ರೀಕ್ಟ್ ಮ್ಯಾನೇಜರಾದ ಪ್ರಶಾಂತ ಗೋಡಕೆ ಇವರ ಮೂಲಕ ಸಭೆಯಲ್ಲಿ ಉಪಸ್ಥಿತರಿರುವ ಎಲ್ಲಾ ಬ್ಯಾಂಕನ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ತಮ್ಮ ಬ್ಯಾಂಕಿನ ಬ್ರ್ಯಾಂಚ್‌ಗಳಿಗೆ ಕೆನರಾ ಬ್ಯಾಂಕ (ಖಖಇಖಿಋ) ಆರೆ್ಸಟಿಯಿಂದ ತರಬೇತಿ ಪಡೆದ ಶಿಭಿರಾರ್ಥಿಗಳಿಗೆ ಸಾಲ ಸೌಲಭ್ಯ ನಿಡುವ ಮುಲಕ ಹಣಕಾಸಿನ ಸಹಾಯವನ್ನು ಮಾಡಿರಿ ಎಂದು ಸಭೆಯಲ್ಲಿ ಮನವಿ ಮಾಡಿದರು. ಮತ್ತು ನರೆಗಾ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ತರಬೇತಿಯನ್ನು ನೀಡಿ ಸ್ವ ಉದ್ಯೋಗ ಮಾಡುವ ರೀತಿಯಲ್ಲಿ ಪ್ರೇರೆಪಿಸಿರಿ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲ ಸೇವೆಯನ್ನು ಸಮಾಜದ ಜನರಿಗೆ ಇದೇ ರೀತಿಯಲ್ಲಿ ನೀಡಿ ಎಂದು ಹೇಳಿದರು.