ದೇವರಹಿಪ್ಪರಗಿ 09: ಕಾರ ಚಾಲಕನ ನಿರ್ಲಕ್ಷ್ಯ ಹಾಗೂ ಅತಿ ಜೋರಾಗಿ ಹೋಗಿ ಒಮ್ಮೆಲೇ ಬ್ರೇಕ್ ಹಾಕಿದ ಕಾರಣ ಕಾರ ಪಲ್ಟಿ ಆಗಿ ಮಹಿಳೆಗೆ ಗಾಯ ಆದ ಘಟನೆ ನಡೆದಿದೆ.
ಪಟ್ಟಣದ ಮಾರ್ಗವಾಗಿ ವಿಜಯಪುರಕ್ಕೆ ಹೋಗುವ ಸಂದರ್ಭದಲ್ಲಿ ಕಾಶಿನಾಥ ಬಂಟನೂರ ಅವರ ಜಮೀನ ಸಮೀಪದ ಬ್ರಿಜ್ ಹತ್ತಿರ ಗಂಗಾಧರ ಮಾನಸಿಂಗ ಹಜೇರಿ ಅವರ ಪತ್ನಿ ಗೆ ಗಾಯವಾದ ಕಾರಣ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾರ ಚಾಲಕ ಕುಮಾರ ಮಂತಯ್ಯ ಹಿರೇಮಠ ಅವರ ನಿರ್ಲಕ್ಷದಿಂದ ಕಾರ ಪಲ್ಟಿ ಆಗಿ ಹೆಂಡತಿಗೆ ಗಾಯವಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.