ಲೋಕದರ್ಶನ ವರದಿ
ವಿಜಯಪುರ 07:ಪ್ರಸ್ತುತ ದಿನಗಳಲ್ಲಿ ಸ್ವಾವಲಂಬಿಯಾಗಿ ಬದುಕಲು ವೃತ್ತಿ ಕೌಶಲ್ಯಾಭಿವೃದ್ದಿ ತರಬೇತಿ ಪಡೆಯುವುದು ಅವಶ್ಯಕವಾಗಿದೆ ಕನರ್ಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರದ ಸಹಾಯಕ ನಿದರ್ೇಶಕ ಶ್ರೀಮತಿ ಎಸ್.ಬಿ.ಬಳ್ಳಾರಿ ಅವರು ಹೇಳಿದರು.
ನಗರೆದ ಕೇಂದ್ರ ಕಾರಾಗೃಹದಲ್ಲಿಂದು ಕೇಂದ್ರ ಕಾರಾಗೃಹ ಹಾಗೂ ಕನರ್ಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ, ವಿಜಯಪುರ ಇವರ ಸಹಯೋಗದಲ್ಲಿ ಕೇಂದ್ರ ಕಾರಾಗೃಹದ ನಿವಾಸಿ ಬಂದಿಗಳಿಗಾಗಿ ಆಯೋಜಿಸಿದ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಜಂಟಿ ನಿದರ್ೇಶಕ ಸಿದ್ದಣ್ಣ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಕೌಶಲ್ಯಯುತವಾಗಿರಬೇಕು. ಕಾರಾಗೃಹದಲ್ಲಿ ಪ್ರಥಮ ಬಾರಿಗೆ ಆಯೋಜಿಸಿರುವ ತರಬೇತಿ ಕಾಯರ್ಾಗಾರದ ಸದುಪಯೋಗ ಬಂದಿನಿವಾಸಿಗಳು ಪಡೆದುಕೊಳ್ಳುವಂತೆ ಕರೆ ನೀಡಿದರು.
ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾಜರ್ುನ ಬಿ.ಸ್ವಾಮಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕರಾಗಿ ಶ್ರೀರಾಮ ಇಂಜಿನೀಯರಿಂಗ್ ಸವರ್ಿಸಸ್ ಇವರು ಭಾಗವಹಿಸಿದ್ದರು.