ಜಾತಿಗಣತಿ: ತಹಸಿಲ್ದಾರ ಡಾ.ವಿನಯಾ ಹೂಗಾರ ಪರೀಶೀಲನೆ

Caste Census: Tahsildar Dr. Vinaya Hugara reviews

ತಾಳಿಕೋಟಿ 07: ಪಟ್ಟಣದಲ್ಲಿ ಮೇ 5 ರಿಂದ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾತಿ ಗಣತಿ ಕಾರ್ಯವನ್ನು ತಹಶೀಲ್ದಾರ ಡಾ.ವಿನಯಾ ಹೂಗಾರ ಅವರು ಪರೀಶೀಲಿಸಿದರು.  

ಪಟ್ಟಣದ ಭಾಗ ಸಂಖ್ಯೆ 41ರ ವ್ಯಾಪ್ತಿಗೆ ಬರುವ ವಡ್ಡರ ಓಣಿಯಲ್ಲಿ ಸೋಮವಾರ ಗಣತಿ ಕಾರ್ಯ ನಡೆಯುತ್ತಿರುವಾಗ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯನಿರತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  

ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಸಿರಸ್ತದಾರ ಜೆ.ಆರ್‌. ಜೈನಾಪೂರ, ಸಿಆರ್ ಸಿ ರಾಜು ವಿಜಾಪುರ ಸಮಾಜ ಕಲ್ಯಾಣ ಇಲಾಖೆಯ ಎಸ್‌. ಎನ್‌.ಮಲ್ಲಾಡೆ, ಎಸ್‌.ಎಂ.ಕಲಬುರ್ಗಿ, ಹಾಗೂ ಶಿಕ್ಷಕ ಬೀರಗೊಂಡ ಇದ್ದರು.