ತಾಂತ್ರಿಕ ಮತ್ತು ಯಾಂತ್ರಿಕ ಜಗತ್ತಿನಲ್ಲಿ ಎಚ್ಚರಿಕೆ ಅಗತ್ಯ- ಪ್ರೊ.ಸುರೇಶ್ ಲಮಾಣಿ
ಹಾವೇರಿ 21:ಆಧುನಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನವಿಲ್ಲದೇ ಯಾವುದೇ ಕಾರ್ಯ ಮುನ್ನಡೆಯುವುದು ಅಸಾಧ್ಯ. ತಾಂತ್ರಿಕ ಮತ್ತು ಯಾಂತ್ರಿಕತೆಯತ್ತ ಜಗತ್ತು ಸಾಗಿದ್ದು ಬಹಳ ಎಚ್ಚರಿಕೆಯಿಂದ ವ್ಯವಸ್ಥೆಯಲ್ಲಿ ಪರಿಕ್ರಮಿಸಬೇಕಿದೆ ಎಂದು ಗದಗ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿಯ ಎಂಎಸ್‌ಸಿ ಭೂವಿಜ್ಞಾನ ಸಂಯೋಜಕ ಪ್ರೊ.ಸುರೇಶ್ ಲಮಾಣಿ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ಕೆ.ಎಲ್.ಇ.ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಐಕ್ಯುಎಸಿ ಉಪಕ್ರಮದಲ್ಲಿ ಭೂಗೋಳಶಾಸ್ತ್ರ ವಿಭಾಗದಿಂದ"ದೂರ ಸಂವೇದಿ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ ತಂತ್ರಜ್ಞಾನದಲ್ಲಿ ಭೂಗೋಳ ಶಾಸ್ತ್ರದ ಸಂಶೋಧನೆ" ಎಂಬ ವಿಷಯದ ಮೇಲೆ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸೂಕ್ಷ್ಮ ಸಂವೇದಿ ವ್ಯವಸ್ಥೆಯ ಮುಖಾಂತರ ಭೂಮಾಪನ ಮತ್ತು ಭೂಮಿಯೊಳಗಿನ ಆಂತರಿಕ ಖನಿಜಾಂಶಗಳನ್ನು ಮೌಲ್ಯಮಾಪನ ಮಾಡುವುದು ದೊಡ್ಡ ಸವಾಲು. ಆದರೆ ಇಂದಿನ ನವ್ಯ ಮಾದರಿಯ ತಾಂತ್ರಿಕ ಪರಿಕರಗಳ ಮುಖಾಂತರವುಗಳನ್ನು ಕಾರ್ಯಸಾಧ್ಯ ಮಾಡಬಹುದಾಗಿದೆ. ಹೊಸ ಮಾದರಿಯ ಜಿಐಎಸ್ ತಂತ್ರಾಂಶದ ಸದ್ಬಳಕೆ ಮತ್ತು ಉಪಯೋಗಿಸಬಹುದಾದ ಅಪ್ಲಿಕೇಷನ್ ಸ್ವರೂಪ ಹಾಗೂ ಅಪ್‌ಡೇಟಿಂಗ ತಂತ್ರಾಂಶಗಳ ಕುರಿತು ಮಾಹಿತಿ ಪಡೆಯುವತ್ತ ಮುಖ ಮಾಡಬೇಕಿದೆ. ಇಂದಿನ ಸಂಶೋಧಕರು ಈ ತಂತ್ರಾಂಶದ ಉಪಯೋಗ ಪಡೆದು ಕಾರ್ಯಸಾಧನೆ ಮಾಡಬಹುದಾಗಿದೆ ಎಂದರು. ಅಲ್ಲದೆ ಜಿಐಎಸ್ ಡೌನ್ಲೋಡ್ ಪ್ರಕ್ರಿಯೆ, ನಕಾಶೆಗಳ ವಿಶ್ಲೇಷಣೆ ಬಗ್ಗೆ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾಲೇಜಿನ ಸ್ಥಾನಿಕ ಸದಸ್ಯ ಆಡಳಿತ ಮಂಡಳಿ ಜೆ.ಎಸ್. ಅರಣಿ ಕಾರ್ಯಗಾರವನ್ನು ಉದ್ಘಾಟಿಸಿದರು. ಪ್ರಾಚಾರ್ಯ ಪ್ರೊ.ಡಿ. ಎ.ಕೊಲ್ಲಾಪುರೆ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಹಾಗೂ ರಕ್ಷಿತಾ ಎಲಿಗಾರ ನಿರೂಪಿಸಿದರು. ಡಾ. ಬಿ.ಏನ್.ಎಲಿಗಾರ ಸ್ವಾಗತ ಮಾಡಿದರು. ಡಾ.ನಾಗರಾಜ್ ಎಂ. ಪ್ರಾಸ್ತಾವಿಕ ಮಾತನಾಡಿದರು. ಶಾರದಾ ಸಂಗೂರ ವಂದಿಸಿದರು. ಕಾರ್ಯಾಗಾರದಲ್ಲಿ ರಾಣೆಬೆನ್ನೂರು ರಾಜರಾಜೇಶ್ವರಿ ಮಹಾವಿದ್ಯಾಲಯ ಆರ್.ಟಿ.ಎಸ್. ಮಹಾವಿದ್ಯಾಲಯ, ಹಾನಗಲ್ಲ ಶ್ರೀ ಕುಮಾರೇಶ್ವರ ಮಹಾವಿದ್ಯಾಲಯ ಸಂಗೂರ ಬಿದರೆಯ ಜಿ.ಎಫ್.ಜಿ.ಸಿ.ಮಹಾವಿದ್ಯಾಲಯ ಹಾಗೂ ಜಿ.ಎಚ್.ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.