ಲೋಕದರ್ಶನ ವರದಿ
ಕೊಪ್ಪಳ 03: ನಗರದ ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆ ಶಾಲಾ ವಾಷರ್ಿಕೊತ್ಸವ ಸಮಾರಂಭದ ನಿಮಿತ್ಯ ಸಮಾಜ ವಿಜ್ಞಾನ ವಸ್ತು ಪ್ರರ್ದಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಮ್ಮ ಭಾಗದ ಧಾಮರ್ಿಕ ಕ್ಷೇತ್ರವಾದ ಗವಿಮಠವನ್ನು ಥರ್ಮಾಕೋಲ್ನಲ್ಲಿ ಸುಂದರವಾದ ಅತಿ ಸೂಕ್ಷ್ಮವಾದ ಕೆತ್ತನೆಯ ಮೂಲಕ ಗವಿಮಠದ ಮಾದರಿಯನ್ನು ಗವಿಸಿದ್ಧೇಶ್ವರ ಸಾಯಂಕಾಲ ಪಾಠಶಾಲೆಯ ಶಿಕ್ಷಕರಾದ ಮಾರುತಿ ಪವಾರ ಇವರು ನಿಮರ್ಿಸಿದ್ದಾರೆ. ಕೇವಲ ಐದು ದಿನಗಳಲ್ಲಿ ಮುಖ್ಯೋಪಾಧ್ಯಯರಾದ ಎನ್ ಎಚ್ ಪಾಟೀಲ್, ಶಿಕ್ಷಕರಾದ ಗವಿಸಿದ್ಧಪ್ಪ ಹತ್ತಿ, ಕವಿತಾ ಇವರ ಮಾರ್ಗದರ್ಶನದಲ್ಲಿ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಯಾದ ಮಹಾಂತೇಶ ಕಾರಟಗಿ ಇವರುಗಳ ಸಹಾಯದಿಂದ ಮಾರುತಿ ಪವಾರ ಸುಂದರವಾದ ಗವಿಮಠವನ್ನು ನಿರ್ಮಿಸಿದ್ದಾರೆ, ಈ ಮಾದರಿಯನ್ನು ರವಿವಾರ ಶ್ರೀ ಗವಿಸಿದ್ಧೇಶ್ವರ ಶಾಲೆಯಲ್ಲಿ ಸಾವಿರಕ್ಕೂ ಅಧಿಕ ಜನರು ಮತ್ತು ವಿದ್ಯಾರ್ಥಿಗಳು ವೀಕ್ಷಿಸಿ, ಸೆಲ್ಫಿ ತೆಗೆದುಕೊಂಡಿರುವುದು ವಿಶೇಷ. ಗವಿಮಠದ ಜೊತೆಗೆ ಇತಿಹಾಸದ ಅನೇಕ ಮಾದರಿಗಳನ್ನು ಪ್ರದರ್ಶನವನ್ನು ಇತರೆ ಶಾಲಾ ಮಕ್ಕಳಿಗಾಗಿ ಮಂಗಳವಾರದವರೆಗೂ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ.
ಮಂಗಳವಾರ ಪ್ರದರ್ಶನ ಮುಕ್ತಾಯವಾದ ನಂತರ ಗವಿಮಠಕ್ಕೆ ಮಾದರಿಯನ್ನು ಒಪ್ಪಿಸಲಾಗುವದು. ನಂತರ ಜರುಗಿದ ಕಾರ್ಯಕ್ರಮದಲ್ಲಿ ಮಾರುತಿ ಪವಾರ್ ಇವರನ್ನು ಗವಿವಟ್ರಸ್ಟನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಇ ಆರ್ ಎಕಬೋಟೆ, ಶಾಲೆಯ ಆಡಳಿತಾಧಿಕಾರಿಗಳಾದ ಗವಿಸಿದ್ಧಪ್ಪ ಕೊಪ್ಪಳ ಇವರುಗಳಿಂದ ಸನ್ಮಾನಿಸಲಾಯಿತು.