ಲೋಕದರ್ಶನ ವರದಿ
ಬೆಳಗಾವಿ, 21 : ಇಂದು ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳಿಗೆ ಕಣಬರಗಿಯ ಸಮತಾ ಶಾಲೆಯ ವತಿಯಿಂದ ಶ್ರದ್ಧಾಂಜಲಿ ಅಪರ್ಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.
ಬಳಿಕ ಮತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶಂಕರ ಬಾಗೇವಾಡಿ ಅವರು "ಬಸವಾದಿ ಶರಣರ ಆಶಯಗಳನ್ನು ತಮ್ಮ ನಡೆ-ನುಡಿಯಲ್ಲಿ ಪಾಲಿಸಿದ ನಿಜ ಶರಣ ಪರಂಪರೆಯ ತುಮಕೂರು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಮಹಾಸ್ವಾಮಿಗಳು ಸರ್ವ ಜನಾಂಗದ ಮಕ್ಕಳಿಗೆ ಲಿಂಗ ತಾರತಮ್ಯವಿಲ್ಲದೆ ಅಕ್ಷರ ದಾಸೋಹವನ್ನು ಸಾವಿರಾರು ವರ್ಷಗಳಿಂದ ನಡೆಸುವ ಮೂಲಕ ಅಕ್ಷರ ಕ್ರಾಂತಿಗೆ ಮಾಡಿದ್ದಾರೆ. ಸರಕಾರದ ಯಾವುದೇ ಅನುದಾನದ ಅಪೇಕ್ಷೆ ಇಲ್ಲದೇ ಪ್ರತಿ ವರ್ಷ ಅಂದಾಜು ಐದು ಸಾವಿರ ಮಕ್ಕಳನ್ನು ಮನೆಯ ಮಕ್ಕಳಂತೆ ಸಲುಹಿದ ಮಾತೃ ಹೃದಯಿ ಶ್ರೀಗಳು ಸರ್ವರಿಗೂ ಆದರ್ಶ ಪ್ರಾಯರಾಗಿದ್ದಾರೆ. ಅಂಥ ಮಹಾನ್ ಪುರುಷರು ಸರ್ವ ಕಾಲಕ್ಕೂ ಬದುಕುತ್ತಾರೆ. ಅವರ ಜೀವನ ಮಾರ್ಗ ನಮ್ಮ ದೇಶದ ಎಲ್ಲ ಕ್ಷೇತ್ರದವರಿಗೆ ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಮಾರ್ಗದರ್ಶನವಾಗಲಿ. ಶ್ರೀಗಳ ಆತ್ಮ ಈ ನೆಲದ ಸರ್ವ ಜನಾಂಗದ ಮಕ್ಕಳ ಹೃದಯದಲ್ಲಿ ಚಿರಸ್ಥಾಯಿಯಾಗಿ ಸದಾ ಕಾಲ ಇರುತ್ತಾರೆ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕನರ್ಾಟಕ ಸರಕಾರ ಕೇಂದ್ರ ಸರಕಾರಕ್ಕೆ ಎರಡು ವರ್ಷಗಳ ಹಿಂದೆಯೇ ಶಿಫಾರಸ್ಸು ಮಾಡಿ ಪತ್ರ ಕಳುಹಿಸಲಾಗಿದೆ. ಈಗಲಾದರೂ ಕೇಂದ್ರ ಸರಕಾರ ಭಾರತ ರತ್ನ ನೀಡಬೇಕೆಂದು ಕೋರಲಾಯಿತು " ಎಂದು ತಮ್ಮ ನುಡಿ ನಮನ
ಸಲ್ಲಿಸಿದರು.