ಹುಕ್ಕೇರಿ 11: ಪಟ್ಟಣದ ಶತಮಾನದ ಅಂಚಿನಲ್ಲಿರುವ ಹುಕ್ಕೇರಿ ಕೋ-ಆಪರೇಟಿವ್ ಬ್ಯಾಂಕು ಗ್ರಾಹಕರ ಸದಸ್ಯರ ಮನಸ್ಸು ಗೆದ್ದು ಆರ್.ಬಿ.ಐ ಅಡಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ಅವರು ಬ್ಯಾಂಕಿನ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗಾವಿ ಜಿಲ್ಲಾ ಪಟ್ಟಣ ಹಾಗೂ ಸೌಹಾರ್ದ ಸಹಕಾರಿ ಬ್ಯಾಂಕ್ ಒಕ್ಕೂಟದ 100 ಕೋಟಿ ರೂಪಾಯಿ ಒಳಗಿನ ಠೇವು ಸಂಗ್ರಹಣೆ ಹಿನ್ನೆಲೆಯಲ್ಲಿ ಜಿಲ್ಲಾ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿಗೆ ಎರಡು ಬಾರಿ ಆಯ್ಕೆಯಾಗಿದೆ.
5215 ಜನ ಸದಸ್ಯರನ್ನು ಹೊಂದಿ 2.41 ಕೋಟಿ ಶೇರ ಬಂಡವಾಳ, 108.83 ಕೋಟಿ ದುಡಿಯುವ ಬಂಡವಾಳ, 744 .81 ಕೋಟಿ ರೂ ಆರ್ಥಿಕ ವ್ಯವಹಾರ ನಡೆಸಿ ಪ್ರಸ್ತಕ, 94.50 ಲಕ್ಷ ರೂ.ನಿವ್ಹಳ ಲಾಭ ಗಳಿಸಿ 0.78 ರಷ್ಟು ಎನ್ಪಿಎ ಹೊಂದಿದೆ. ಬ್ಯಾಂಕ ಅಭಿವೃದ್ದಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಮಾಣಿಕ ಪರಿಶ್ರಮದಿಂದ ಹಾಗೂ ಠೇವಣಿದಾರರ ವಿಶ್ವಾಸ ಗ್ರಾಹಕರ ಸಹಕಾರ ಕಾರಣ ಎಂದರು.
ಭಾರತೀಯ ರಿಝರ್ವ ಬ್ಯಾಂಕಿನ ಅಡಿ ಮೋಬೈಲ್ ಬ್ಯಾಂಕಿನ, ಯು.ಪಿಆಯ್. ಸೇವೆ. 6 ಶಾಖೆಯ ಜೊತೆಗೆ ಇನ್ನು 4 ಶಾಖೆಗಳು ಕಾರ್ಯನಿರ್ವಹಿಸಲಿವೆ.
ಉಪಾದ್ಯಕ್ಷ ಪ್ರಭು ವಿರಭದ್ರ ಸಾಂಬಾರೆ, ನಿರ್ದೇಶಕ ಗುರುಲಿಂಗಪ್ಪಾ ಗಂಧ, ಶಿವಾನಂಧ ನೂಲಿ, ರಾಜಕುಮಾರ ಬಾಗಲಕೋಟಿ, ಮೌನೇಶ್ವರ ಪೋತದಾರ, ವ್ಯವಸ್ಥಾಪಕ ಕೆ.ಬಿ ಬಂದಾಯಿ ಉಪಸ್ಥಿತರಿದ್ದರು.